ಜಿಲ್ಲೆ

ಕರೊನಾ ಸೋಂಕು- ಭಟ್ಕಳದಲ್ಲಿ ಹೆಲ್ತ್ ಎಮರ್ಜೆನ್ಸಿ ಡಿಕ್ಲೇರ್ ಮಾಡಿದ ಜಿಲ್ಲಾಧಿಕಾರಿ

Mysuru Rural

ಭಟ್ಕಳ: ದೇಶಾದ್ಯಂತ ಕರೊನಾ ಸೋಂಕು ತಡೆಯಲು ಲಾಕ್​ಡೌನ್ ಚಾಲ್ತಿಯಲ್ಲಿರುವಂತೆಯೇ ಭಟ್ಕಳ ಪಟ್ಟಣ ಮತ್ತು ಕೆಲವು ತಾಲೂಕು ಪಂಚಾಯಿತಿ, ಗ್ರಾಪಂ ವ್ಯಾಪ್ತಿಯಲ್ಲಿ ಹೆಲ್ತ್​ ಎಮರ್ಜೆನ್ಸಿಯನ್ನು ಜಿಲ್ಲಾಧಿಕಾರಿ ಘೋಷಿಸಿದ್ದಾರೆ.

ವಿಪತ್ತು ನಿರ್ವಹಾಣ ಕಾಯ್ದೆಯ 34ನೇ ಸೆಕ್ಷನ್ ಪ್ರಕಾರ ಭಟ್ಕಳ ಟಿಎಂಸಿ, ಜಾಲಿ ತಾ.ಪಂ., ಶಿರಾಲಿ, ಹೆಬಾಳೆ, ಮಾವಿನಕುರ್ವೆ, ಮುಂಡಳ್ಳಿ, ಯಳವಡಿಕಾವೂರು, ಮುಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಲ್ತ್ ಎಮರ್ಜೆನ್ಸಿಯನ್ನು ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್​ ಕೆ. ಘೋಷಿಸಿದ್ದಾರೆ. ಇದು ನಿನ್ನೆಯಿಂದ ಚಾಲ್ತಿಗೆ ಬಂದಿದೆ. ಇದು ಮುಂದಿನ ಆದೇಶದ ತನಕ ಜಾರಿಯಲ್ಲಿರುತ್ತದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಈ ಹೆಲ್ತ್ ಎಮರ್ಜೆನ್ಸಿ ಘೋಷಣೆಗೆ ಮೊದಲು ಸಂಬಂಧಪಟ್ಟ ವಿಪತ್ತು ನಿರ್ವಹಣಾ ತಂಡ ಮತ್ತು ಇತರೆ ಪರಿಣತರೊಡನೆ ಜಿಲ್ಲಾಧಿಕಾರಿ ಸಮಾಲೋಚನೆ ನಡೆಸಿದ್ದು, ಅದರ ಅಂತಿಮ ಫಲ ಇದು ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ ರಾಜ್ಯದಲ್ಲಿ ಕರೊನಾ ಸೋಂಕಿಗೆ ಒಳಗಾಗಿ ಪ್ರಾಣ ಕಳೆದುಕೊಂಡವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ಸೋಂಕುಪೀಡಿತರ ಸಂಖ್ಯೆ 60ರ ಆಸುಪಾಸಿನಲ್ಲಿದೆ.