ಗದಗ : ಸಾರ್ವಜನಿಕರಿಗೆ ಒಳ್ಳೆಯ ರೀತಿಲ್ಲಿ ಆರೋಗ್ಯ ಜಾಗೃತಿ ಮತ್ತು ಆರೋಗ್ಯ ಇಲಾಖೆಯ ಸೇವೆಗಳನ್ನು ನೀಡಿ ಸಮುದಾಯದಲ್ಲಿ ತಮ್ಮ ಘನತೆಯನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ನೌಕರರ ಸಂಘದಿAದ ಆರೋಗ್ಯ ಇಲಾಖೆಯ ನೌಕರರ ಮತ್ತು ಅಧಿಕಾರಿಗಳ ಕುಂದು ಕೊರತೆ ಮತ್ತು ನಿವಾರಣೆಗೆ ಸಮನ್ವಯತೆಯಿಂದ ಸ್ಪಂದಿಸಿ ಸಮಸ್ಯೆಗಳನ್ನ ಪರಿಹರಿಕೊಳ್ಳುವಲ್ಲಿ ಎಲ್ಲ ಸಂಘಟಿಕರು ಪ್ರಯತ್ನಶೀಲರಾಗಬೇಕೆಂದು ಹೇಳಿ ರಾಜ್ಯ ಸರ್ಕಾರಿ ನೌಕರರ ಸಂಘದ ಎಲ್ಲರನ್ನು ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಿದರು.
ಅವರು ಕರ್ನಾಟಕ ರಾಜ್ಯ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘ ಗದಗ ಜಿಲ್ಲಾ ಘಟಕ ಮತ್ತು ಜಿಲ್ಲಾ ಸಮೀಕ್ಷಾ ಘಟಕದಿಂದ ಹಮ್ಮಿಕೊಂಡ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಗದಗ ಜಿಲ್ಲಾ ಘಟಕಕ್ಕೆ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ಸಿದ್ದಪ್ಪ ಎನ್ ಲಿಂಗದಾಳ ಹಾಗೂ ನಿರ್ದೇಶಕರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿಸಿ ಮಾತನಾಡಿ
ಗದಗ ಜಿಲ್ಲೆಯಲ್ಲಿ ನೌಕರರ ಸಂಘಟನೆಯ ಪಧಾಧಿಕಾರಿಗಳು ನೌಕರರ ಬೇಡಿಕೆಗಳ ಬಗ್ಗೆ ಹೆಚ್ಚು ಕ್ರೀಯಾ ಶೀಲರಾಗಿ ಹೋರಾಟಗಳನ್ನು ಮಾಡುತ್ತಿದ್ದ ಅವರ ಕಾರ್ಯ ಸ್ಲಾಘನೀಯವಾಗಿದೆ ಲಿಂಗದಾಳವರು ಆರೋಗ್ಯ ಇಲಾಖೆಯ ಆರೋಗ್ಯ ಸಹಾಯಕರ ನೌಕರರ ಸಂಘವನ್ನು ಕಟ್ಟುವಲ್ಲಿ ಪರಿಶ್ರಮ ಬಹುದೊಡ್ಡದಿದೆ ಎಂದು ಹೇಳಿದರು
ಸನ್ಮಾನ ಸ್ವೀಕರಿ ಮಾತನಾಡಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಗದಗ ಜಿಲ್ಲಾ ಘಟಕದ ಜಿಲ್ಲಾ ಕಾರ್ಯಾಧ್ಯಕ್ಷರಾದ ಶಿದ್ದಪ್ಪ ಎನ್ ಲಿಂಗದಾಳ ರವರು ಮಾತನಾಡಿ ಸಂಘಟನೆಗಳು ನೌಕರರ ಹಿತರಕ್ಷಣೆ ಮತ್ತು ಸರ್ಕಾರದಿಂದ ಕಾಲ ಕಾಲಕ್ಕೆ ಬರಬೇಕಾದ ಹೆಚ್ಚಿನ ವೇತನ ಮತ್ತು ಇನ್ನಿತರ ಹಕ್ಕುಗಳನ್ನು ನ್ಯಾಯಬದ್ಧ ಕೊಡಿಸಲು ಮತ್ತು ನೌಕರರ ಹಿತರಕ್ಷಣೆ ಮಾಡುವಂತಹ ಮಹತ್ವದ ಕಾರ್ಯವನ್ನು ನಿರ್ವಹಿಸುತ್ತಿದೆ ತಾವೇಲ್ಲ ಸಂಘದ ಸದಸ್ಯರಾಗಿದ್ದು ಸಂಘಟನೆ ಕರೆ ಕೊಟ್ಟಾಗ ಸ್ವಯಂ ಪ್ರೇರಿತರಾಗಿ ಸಂಘದ ಹೋರಾಟ ಮತ್ತು ಸಂಘಟನೆಯ ಚಟುವಟಿಕೆಯಲ್ಲಿ ಮುಖ್ಯವಾಹಿನಿಯಲ್ಲಿ ಬರಬೇಕಾಗಿದೆ. ಈಗಾಗಲೇ ಮಾನ್ಯ ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಾಕ್ಷರಿಯವರ ಸಂಘಟಿತ ಹೋರಾಟದಿಂದ ೭ವೇತನವನ್ನು ನಾವೇಲ್ಲರು ಪಡೆದಿರುತ್ತೇವೆ .ಎನ್ ಪಿ ಎಸ್ ನೌಕರರಿಗೆ ಒಪಿಎಸ್ ಜಾರಿಗಾಗಿ ೨೦೨೫ ರಲ್ಲಿ ಕೊಡಿಸವಂತಹ ಮಹತ್ವದ ಹೆಜ್ಜೆಯನ್ನು ಇಟ್ಟಿದ್ದಾರೆ ಅದರ ಜೊತೆಗೆ ಉಚಿತ ಆರೋಗ್ಯ ಚಿಕಿತ್ಸೆಯ ಭಾಗ್ಯ ನೌಕರರಿಗೆ ದೊರೆಯಲಿದೆ . ತಾವೇಲ್ಲರು ಸಂಘದ ಕರೆಗೆ ಓಗೊಟ್ಟು ಬರಬೇಕು. ನಮ್ಮೆಲ್ಲರನ್ನು ಕರೆಸಿ ಅಭಿಮಾನದಿಂದ ಸನ್ಮಾನಿಸಿದಕ್ಕೆ ಕೃತಜ್ಞತೆಯನ್ನು ಸಲ್ಲಿಸುವೆ ಎಂದು ಹೇಳಿದರು.
ಆರೋಗ್ಯ ನಿರೀಕ್ಷಣಾದಿಕಾರಿಗಳ ಸಂಘದ ಜಿಲ್ಲಾ ಅಧ್ಯಕ್ಷರಾದ ಬಿ.ಸಿ ಹಿರೇಹಾಳ ಮಾತನಾಡಿ ನೌಕರರು ಸಂಘಟನೆಗೆ ಬೆನ್ನೆಲುಬಾಗಿ ಪ್ರೋತ್ಸಹಿಸಬೇಕು ನಿಮ್ಮೆಲ್ಲರ ಪ್ರತಿನಿಧಿಯಾಗಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸುವ ಮತ್ತು ನಿಮ್ಮ ನೋವು ನಲಿವುಗಳ ಸಂಘವು ಸಧಾ ಸ್ಪಂದಿಸುವ ಕಾರ್ಯವನ್ನು ಮಾಡುತ್ತಿದೆ ಎಂದು ಹೇಳಿದರು
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಅಜಯಕುಮಾರ ಕಲಾಲ ಮತ್ತು ಕೆ ಎ ಬೂದಿಹಾಳ ಮಾತನಾಡಿ ನಮ್ಮ ಸಂಘಟನೆ ಬೆಳಕಿಗೆ ಬಂದದ್ದು ಮತ್ತು ನೌಕರರ ಹಿತರಕ್ಷಣೆ ಗೌರವ ದೊರೆತಿದ್ದು ಸಿದ್ದಪ್ಪ ಲಿಂಗದಾಳವರು ಜಿಲ್ಲಾ ಅಧ್ಯಕ್ಷರಾಗಿದ್ದಾಗ ಎಂದು ಹೆಮ್ಮೆಯಿಂದ ಹೇಳುತ್ತಿದ್ದೇನೆ. ಮತ್ತು ಇಂದು ನಾವೇಲ್ಲರು ನಿರ್ದೇಶಕರಾಗಿ ಆಯ್ಕೆಯಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ ಉನ್ನತವಾದ ಅಧಿಕಾರವನ್ನು ಪಡೆದಿರುತ್ತೇವೆ ಆದರಿಂದ ತಾವೇಲ್ಲರು ತಮ್ಮ ಸಮಸ್ಯೆಗಳನ್ನು ಸಂಘಟಿಕರಿಗೆ ತಿಳಿಸಿ ನಾವು ಆರೋಗ್ಯ ಇಲಾಖೆಯ ಸೇವೆಯಲ್ಲಿ ಒಳ್ಳೆಯ ಸೇವೆಯನ್ನು ಮುಂಚೂಣಿಯಲ್ಲಿ ನಿಂತು ಕಾರ್ಯವನ್ನು ನಿರ್ವಹಿಸಿ ಪ್ರಶಂಸೆಗೆ ಎಲ್ಲರು ಪಾತ್ರರಾಗೋಣ ಎಂದು ಹೇಳಿದರು.
ಸನ್ಮಾನಗೊಂಡ ವಾಯ್ ಎನ್ ಕಡೆಮನಿ.ಶ್ರೀಮತಿ ಸರೋಜ ಎಸ್ ಕಟ್ಟಿಮನಿ. ಏಕನಾಥಗೌಡ ಪಾಟೀಲ ಡಾ.ರವಿ ಕಡಗಾವಿ ಗೋಪಾಲ ಸೂರಪೂರ ಕೆ ವಿ ಬಡಿಗೇರ ಮುಂತಾದವರು ಉಪಸ್ಥಿತರಿದ್ದರು
ಪ್ರಾರ್ಥನೆಯನ್ನು ಮಂಜುನಾಥ ಸಜ್ಜನ ಗೈದರು. ಕಾರ್ಯಕ್ರಮವನ್ನು ಏಕನಾಥಗೌಡ ಪಾಟೀಲ ರವರು ನಿರೂಪಿಸಿದರು. ಬಸವರಾಜ ಸೋಮಗೊಂಡ ಸ್ವಾಗತಿಸಿದರು