RAICHUR 
ಜಿಲ್ಲೆ

ಕೋವಿಡ್ ಒಮಿಕ್ರಾನ್ ಸೋಂಕು ಎದುರಿಸಲು ಆರೋಗ್ಯ ಇಲಾಖೆ ಸಿದ್ದತೆ, ರಿಮ್ಸ್‌ನಲ್ಲಿ 80 ಬೆಡ್, ತಾಲೂಕು ಆಸ್ಪತ್ರೆಗಳಲ್ಲಿ 05 ಬೆಡ್ ವ್ಯವಸ್ಥೆ

ರಾಯಚೂರು ದೇಶದೆಲ್ಲೆಡೆ ಕೋವಿಡ್ -19ರ ರೂಪಾಂತರಿ ಒಮಿಕ್ರಾನ್ ಸೋಂಕು ಹರಡುವ ಭೀತಿ ಎದುರಾಗಿದ್ದು, ರಾಜ್ಯ ಸರ್ಕಾರ ಈಗಾಗಲೇ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದ್ದರಿಂದ ಜಿಲ್ಲೆಯ ರಿಮ್ಸ್ ಆಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಕೋವಿಡ್ ವಾರ್ಡ್ ನಿರ್ಮಾಣ ಮಾಡುವುದ ಜತೆಗೆ ಜಿಲ್ಲಾ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಎಲ್ಲ ಪ್ರಾಥಮಿಕ ಕೇಂದ್ರದಲ್ಲಿ ಕೋವಿಡ್ ಟೆಸ್ಟ್ ಮಾಡಲು ಸಿದ್ದತೆ ನಡೆಸಿದೆ.

ಕಳೆದ ಎರಡು ವರ್ಷದಿಂದ ಜಿಲ್ಲೆಯಲ್ಲಿ ಯಾವುದೇ ಕೊರೊನ ಪ್ರಕರಣ ಇಲ್ಲದೆ ಕೋವಿಡ್ ಮುಕ್ತ ಜಿಲ್ಲೆಯಾತ್ತು. ಆದರೆ ರಾಜ್ಯದಲ್ಲಿ ಪ್ರಕರಣಗಳು ದಿನೆ ದಿನೆ ಹೆಚ್ಚಳವಾಗಿರುವುದರಿಂದ ಜನರಲ್ಲಿ ಆತಂಕ ಎದುರಾಗಿದೆ.

ಅಧಿಕಾರಿಗಳಿಂದ ಕೋವಿಡ್ ಮಾಕ್ ಡ್ರಿಲ್ ರಾಯಚೂರಿನ ರಿಮ್ಸ್ ವೈದ್ಯಕೀಯ ವಿಜ್ಞಾನಗಳ ಬೋಧಕ ಆಸ್ಪತ್ರೆಯಲ್ಲಿ ರಿಮ್ಸ್ ನಿರ್ದೇಶಕ ಡಾ.ರಮೇಶ, ಡೆಪಿಟಿ ಎಂಎಸ್ ಡಾ.ಅರವಿಂದ ಸಾಂಗ್ವಿ ಅವರು ಕೋವಿಡ್ ಮಾಕ್ ಡ್ರಿಲ್ ನಡೆಸಿದರು. ಈಗಾಗಲೇ ಇರುವ ಸೌಲಭ್ಯಗಳ ಪರಿಶೀಲನೆ ಜೊತೆ ಬಳಕೆಯಿಲ್ಲದ ವೆಂಟಿಲೆಟರ್‌ಗಳ ಪುನರ್ ಅಳವಡಿಕೆಗೆ ಸೂಚನೆ ನೀಡಿದರು. ಆಸ್ಪತ್ರೆಯ ಒಟ್ಟು 750 ಬೆಡ್‌ಗಳಲ್ಲಿ 80 ಬೆಡ್‌ಗಳು ಕೋವಿಡ್ ಸೋಂಕಿತರ ಬಳಕೆಗೆ ಲಭ್ಯವಿದ್ದು ಎಲ್ಲ ಬೆಡ್‌ಗಳಿಗೆ ವೆಂಟಿಲೆಟರ್ ಸೌಲಭ್ಯ ಒದಗಿಸಿದ್ದಾರೆ.

ಜಿಲ್ಲೆಯಲ್ಲಿ ಎಷ್ಟು ಬೇಡ್‌ಗಳು

ನಗರದ ರಿಮ್ಸ್ ಆಸ್ಪತ್ರೆ ಸೇರಿದಂತೆ ಎಲ್ಲಾ ತಾಲೂಕಿನ ಪ್ರತಿ ಆಸ್ಪತ್ರೆಯಲ್ಲಿ 5 ಬೆಡ್ ಹಾಗೂ ರಿಮ್ಸ್ ಆಸ್ಪತ್ರೆಯಲ್ಲಿ ಮೂರು ವಾರ್ಡ್‌ಗಳಲ್ಲಿ ಒಟ್ಟು 80 ಬೆಡ್‌ಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಇದಲ್ಲಿ ಚಿಕ್ಕ ಮಕ್ಕಳ ವಾರ್ಡ್‌ನಲ್ಲಿ 20 ಬೆಡ್, ಬಾಣಂತಿರಿಗೆ 05 ಬೆಡ್ ಹಾಗೂ ಸಾಮಾನ್ಯ ಜನರಿಗೆ 55 ಬೆಡ್‌ಗಳು ಹಾಗೂ ತಾಲೂಕು ಆಸ್ಪತ್ರೆಯಲ್ಲಿ 05 ಬೆಡ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಈ ಕೋವಿಡ್ ವಾಡ್‌ನಲ್ಲಿ ಒಟ್ಟು 3 ತಂಡ ಕಾರ್ಯ ನಿರ್ವಹಣೆ ಮಾಡಲಾಗುತ್ತಿದ್ದು, ಒಂದು ತಂಡದಲ್ಲಿ ಇಬ್ಬರು ಸಿಸ್ಟರ್ಸ್‌, ಇಬ್ಬರು ಸಹಾಯಕರು ಹಾಗೂ ಮೂರು ಜನ ವೈದ್ಯರು ರೋಗಿಗಳನ್ನು ನೋಡಿಕೊಳ್ಳಲಿದ್ದಾರೆ.

ಆಕ್ಸಿಜನ್ ಸಮಸ್ಯೆ ಇಲ್ಲಾ

ಈ ಹಿಂದೆ 2020 ರಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲೆಯ ಮಾನ್ವಿ, ಸಿಂಧನೂರು, ದೇವದುರ್ಗ ಹಾಗೂ ಲಿಂಗಸೂಗೂರು ತಾಲೂಕ ಆಸ್ಪತ್ರೆಗಳಲ್ಲಿ 4 ಐಸಿಯು ವಾರ್ಡ್, 50 ಆಕ್ಸಿಜನ್ ಬೆಡ್ ಹಾಗೂ 19 ವೆಂಟಿಲೇಟರ್ ಬೆಡ್‌ಗಳ ಸಿದ್ಧವಾಗಿ ಇಟ್ಟಿದ್ದರು, ಒಂದು ವೇಳೆ ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾದರೆ ತಾಲೂಕು ಕೇಂದ್ರದಲ್ಲಿಯೇ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಸಿದ್ದತೆ ನಡೆಸಿದೆ.

ಜಿಲ್ಲೆಯ ರಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಮುಂಜಾಗೃತ ಕ್ರಮವಾಗಿ ಮೂರು ವಾರ್ಡ್‌ನಲ್ಲಿ ಒಟ್ಟು 80 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದ್ದು, ವೃದ್ದರು, ಮಕ್ಕಳು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಒಂದು ವೇಳೆ ಉಸಿರಾಟದ ತೊಂದರೆ, ಕೆಮ್ಮು, ನೆಗಡಿ, ಜ್ವರ ಕಂಡುಬಂದರೆ ತಕ್ಷಣವೇ ಹತ್ತಿರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿರಿ. ಕೋವಿಡ್‌ಗೆ ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ.

ಡಾ.ಅರವಿಂದ ಸಾಂಗ್ವಿ ಡಿಪಿಟಿ ಎಂಎಸ್ ರಿಮ್ಸ್ ಆಸ್ಪತ್ರೆ

ಜಿಲ್ಲೆಯಲ್ಲಿ ಕೋವಿಡ್ ಮುಂಜಾಗೃತ ಕ್ರಮವಾಗಿ ರಿಮ್ಸ್‌ನಲ್ಲಿ 80 ಬೆಡ್ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ 5 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ತಾಲೂಕು ಆಸ್ಪತ್ರೆಗೆ 200 ಆರ್‌ಟಿಪಿಸಿಆರ್ ಕಿಟ್‌ಗಳನ್ನು ನೀಡಿದ್ದು, ಕೋವಿಡ್ ಲಕ್ಷಣಗಳು ಕಂಡುಬಂದರೆ ಪರೀಕ್ಷೆ ಮಾಡಿ ಚಿಕಿತ್ಸೆ ಪಡೆಯಿರಿ. ಆತಂಕ ಪಡುವ ಅವಶ್ಯಕತೆ ಇಲ್ಲಾ ಜಾಗೃತರಾಗಿರಿ.

ಡಾ.ಸುರೇಂದ್ರ ಬಾಬು ಡಿಎಚ್‌ಓ ರಾಯಚೂರು