ಜಿಲ್ಲೆ

ವಿಮೆ ಮಾಹಿತಿ ಹಂಚಿಕೊಳ್ಳಲು ಸೂಚನೆ

ಪಂಕಜ ಕೆ.ಎಂ.

ಬೆಂಗಳೂರು: ಸರ್ಕಾರಿ ಆರೋಗ್ಯ ವಿಮಾ ಯೋಜನೆ ಹೊಂದಿರುವ ಇಲಾಖೆಗಳು, ಲಾನುಭವಿಗಳ ಮಾಹಿತಿಯನ್ನು ಸುವರ್ಣ ಆರೋಗ್ಯ ಸುರಕ್ಷ ಟ್ರಸ್ಟ್ (ಎಸ್‌ಎಎಸ್‌ಟಿ)ನೊಂದಿಗೆ ಹಂಚಿಕೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಪರ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಅನೇಕ ಇಲಾಖೆಗಳು ಎಸ್‌ಎಎಸ್‌ಟಿ ಜತೆ ಸಮಾಲೋಚಿಸದೆ ಸಿಬ್ಬಂದಿಗೆ ಆರೋಗ್ಯ ವಿಮಾ ಯೋಜನೆ ಒದಗಿಸಿವೆ. ಇದರಿಂದ ಒಬ್ಬರಿಗೆ ಎರಡು ಬಾರಿ ಪಾವತಿ ಮತ್ತು ನಕಲಿ ಪಾವತಿಯಾಗುತ್ತಿದೆ. ಇದನ್ನು ತಪ್ಪಿಸಲು ಯಾವುದೇ ಇಲಾಖೆ, ಸಿಬ್ಬಂದಿಗೆ ಆರೋಗ್ಯ ವಿಮಾ ಯೋಜನೆ ನೀಡುವ ಸಮಯದಲ್ಲಿ. ಲಾನುಭವಿಯ ಆಧಾರ್ ಮತ್ತು ಪಡಿತರ ಚೀಟಿ ಸಂಖ್ಯೆಯನ್ನು ಕಡ್ಡಾಯವಾಗಿ ಬಳಸಬೇಕೆಂದು ಆದೇಶಿಸಿದೆ.

ಅಲ್ಲದೆ ಯಾವುದೇ ಇಲಾಖೆ ಆರೋಗ್ಯ ವಿಮೆಗೆ ಸಂಬಂಧಿಸಿದಂತೆ, ಹೊಸ ಯೋಜನೆ ಪರಿಶೀಲನೆಗಾಗಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ಗೆ ಕಳುಹಿಸುವಂತೆಯೂ ಸೂಚಿಸಲಾಗಿದೆ.