ಬ್ರಹ್ಮಾವರ: ವಾದಕ ವ್ಯಸನಿಗಳು ದೇಶಕ್ಕೆ ಮತ್ತು ಸವಾಜಕ್ಕೆ ವಾರಕ. ಯುವ ಜನಾಂಗ ದೇಶದ ಸಂಪತ್ತು ವಾದಕ ವಸ್ತುವಿನ ದಾಸರಾದರೆ ಆರೋಗ್ಯ ಹಾಳು ವಾಡಿಕೊಳ್ಳುವುದಲ್ಲದೆ ಬಂಧುಗಳು ಮತ್ತು ಸವಾಜವನ್ನು ದೂರ ವಾಡಿಕೊಳ್ಳುತ್ತಾರೆ ಎಂದು ಬ್ರಹ್ಮಾವರ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಅಶೋಕ್ ವಾಳಲಗಿ ಹೇಳಿದರು.
ಶನಿವಾರ ಚಾಂತಾರು ಬಸ್ ನಿಲ್ದಾಣ ಬಳಿಯ ಬೀದಿಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖ, ಬ್ರಹ್ಮಾವರ ಪೊಲೀಸ್ ಠಾಣೆ, ಚಾಂತಾರು ಗ್ರಾಮ ಪಂಚಾಯಿತಿ, ಕ್ರಾಸ್‌ಲ್ಯಾಂಡ್ ಕಾಲೇಜಿನ ಸಹಯೋಗದಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ರೆಡ್‌ಕ್ರಾಸ್ ಟಕ, ಕಲೆ ಮತ್ತು ಸಾಹಿತ್ಯ ವೇದಿಕೆ ಮತ್ತು ವಿದ್ಯಾರ್ಥಿ ಸಂದ ಆಶ್ರಯದಲ್ಲಿ ನಡೆದ ವಾದಕ ದ್ರವ್ಯ ವಿರೋಧಿ ಜಾಗೃತಿ, ವಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಎಸ್‌ಐ ವಿಠಲ್ ಮಾತನಾಡಿ, ವಾದಕ ಪದಾರ್ಥಗಳ ಸೇವನೆಯಿಂದ ದೇಹ ಮನಸುಗಳ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾಲೇಜು ಪ್ರಾಂಶುಪಾಲ ಡಾ.ರಾಬರ್ಟ್ ಕ್ಲೈವ್ ಅಧ್ಯಕ್ಷತೆ ವಹಿಸಿದ್ದರು. ವಾದಕ ವ್ಯಸನದ ಬಗ್ಗೆ ವಿದ್ಯಾರ್ಥಿಗಳಿಂದ ಮೈಮ್ ಶೋನ ನಡೆಯಿತು.
ಚಾಂತಾರು ಗ್ರಾಪಂ ಪಿಡಿಒ ಸತೀಶ ನಾಯ್ಕ, ಪೊಲೀಸ್ ಸಿಬ್ಬಂದಿ ಸುರೇಶ್, ಉಪಪ್ರಾಂಶುಪಾಲ ಹಾಗೂ ವಾದಕ ದ್ರವ್ಯ ವಿರೋಧಿ ಜಾಗೃತಿ ಸಮಿತಿ ಸಂಚಾಲಕ ಬಿಜು ಜೇಕಬ್, ಎನ್‌ಎಸ್‌ಎಸ್ ಟಕದ ಯೋಜನಾಧಿಕಾರಿ ಸುಕುವಾರ್ ಶೆಟ್ಟಿಗಾರ್, ಅಶ್ವಿನಿ, ಕಲೆ ಮತ್ತು ಸಾಹಿತ್ಯ ವೇದಿಕೆ ಸಂಚಾಲಕಿ ಸುಮಿತ್ರಾ, ರೂಪಾ, ವಿದ್ಯಾರ್ಥಿ ಸಂ ಸಂಚಾಲಕಿ ದೀಪಾ ಕಿತ್ತೂರು, ರೆಡ್‌ಕ್ರಾಸ್‌ನ ನವೀನಕುವಾರ್ ಶೆಟ್ಟಿ ಹಾಜರಿದ್ದರು. ವಿದ್ಯಾರ್ಥಿಗಳಾದ ಬರ್ನಿಸ್ ಕಾರ್ಯಕ್ರಮದ ವಾಹಿತಿ ನೀಡಿದರು. ಸತ್ಯವತಿ ಸ್ವಾಗತಿಸಿರು. ಎ.ಶೇಷಗಿರಿ ಭಟ್ ನಿರೂಪಿಸಿದರು.