ಜಿಲ್ಲೆ

ಫೆ.2ರಂದು ಆರೋಗ್ಯ ದಂಪತಿ ಹಾಸ್ಯ ಕಾರ್ಯಕ್ರಮ

ಹಾಸನ: ಖಾಸಗಿ ವಾಹಿನಿ ಸಹಯೋಗದಲ್ಲಿ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಫೆ.2ರಂದು ದಂಪತಿಗಳಿಗಾಗಿ ಆರೋಗ್ಯ ದಂಪತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗಾಯಕ ಗೋನಾಸ್ವಾಮಿ ತಿಳಿಸಿದರು.

ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ದಂಪತಿಗಳಿಗಾಗಿ ಆರೋಗ್ಯ ದಂಪತಿ ಹಾಸ್ಯಭರಿತ ಕಾರ್ಯಕ್ರಮ ಹಾಗೂ ಜಾನಪದ ಜಕ್ಕಣಕ್ಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಫೆ.2ರಂದು ಬೆಳಗ್ಗೆ 10 ಗಂಟೆಗೆ ಶುರುವಾಗಿ ಸುಮಾರು 4 ಗಂಟೆವರೆಗೂ ಕಾರ್ಯಕ್ರಮ ನಡೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ದಂಪತಿ ಯಾವ ಯಾವ ಕಲೆ, ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುತ್ತಾರೋ ಆ ಬಗ್ಗೆ ವೇದಿಕೆಯಲ್ಲಿ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ಉತ್ತಮ ಪ್ರದರ್ಶನ ನೀಡಿ ಗೆದ್ದವರಿಗೆ ಬಹುಮಾನ ನೀಡಲಾಗುವುದು. ಅಳಿಯುತ್ತಿರುವ ಜಾನಪದ ಕಲೆ ಉಳಿಸುವುದು, ದಂಪತಿ ನಡುವೆ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡುವುದು ಈ ಕಾರ್ಯಕ್ರಮದ ಉದ್ದೇಶ. ಕಾರ್ಯಕ್ರಮದಲ್ಲಿ ಖ್ಯಾತ ಹಾಸ್ಯ ಕಲಾವಿದರಾದ ಮಿಮಿಕ್ರಿ ಗೋಪಿ, ಪ್ರತಿಭಾಗೌಡ ಸೇರಿದಂತೆ ಹಲವರು ಆಗಮಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ರೋಟರಿ ಇನ್ನರ್ ವ್ಹೀಲ್ ಅಧ್ಯಕ್ಷರಾದ ಡಾ.ತನುಜಾ, ಕರವೇ ಮುಖಂಡ ವೆಂಕಟೇಶ್, ಶಿವರಾಜ್ ಇದ್ದರು.