ಶ್ರೀರಾಗಂ ವಾದ್ಯ ಕಲಾಸಂಘ ಕುಮಾರಮಂಗಲ ನೇತೃತ್ವದಲ್ಲಿ ನಡೆದ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಗ್ರಾ.ಪಂ.ಸದಸ್ಯ ಹಮೀದ್ ಉದ್ಘಾಟಿಸಿದರು. ವಾದ್ಯ ಕಲಾ ಸಂಘದ ಅಧ್ಯಕ್ಷ ರಾಮಕೃಷ್ಣ ಪುತ್ತಿಗೆ ಮತ್ತಿತರರಿದ್ದರು. 
ಜಿಲ್ಲೆ

ಆರೋಗ್ಯ ತಪಾಸಣೆ ಉಚಿತ ಶಿಬಿರ

ಸೌಮ್ಯ ಆರ್

ಬದಿಯಡ್ಕ: ಶ್ರೀರಾಗಂ ವಾದ್ಯ ಕಲಾಸಂಘ ಕುಮಾರಮಂಗಲ ನೇತೃತ್ವದಲ್ಲಿ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಭಾನುವಾರ ಹಮ್ಮಿಕೊಳ್ಳಲಾಯಿತು.

ನೀರ್ಚಾಲು ಸಮೀಪದ ಕಡಂಬಳ ಜಿ.ಡಬ್ಲ್ಯೂ.ಎಲ್.ಪಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾದ್ಯ ಕಲಾ ಸಂಘದ ಅಧ್ಯಕ್ಷ ರಾಮಕೃಷ್ಣ ಪುತ್ತಿಗೆ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ.ಸದಸ್ಯ ಹಮೀದ್ ಉದ್ಘಾಟಿಸಿದರು. ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸದಸ್ಯ ಕೆ.ಪಿ.ಅನಿಲ್ ಕುಮಾರ್ ಮುಖ್ಯ ಅತಿಥಿಯಾಗಿ ಮಾತನಾಡಿದರು. ಶಾಲಾ ಮುಖ್ಯಶಿಕ್ಷಕಿ ದೇವಕಿ, ಶಿಕ್ಷಕ ಸತೀಶ್, ರಾಘವನ್ ಶುಭಾಶಂಸನೆಗೈದರು. ಸುಧೀಶ್ ಸ್ವಾಗತಿಸಿ, ನವ್ಯಶ್ರೀ ವಂದಿಸಿದರು.