ಜಿಲ್ಲೆ

ಉಚಿತ ಆರೋಗ್ಯ ತಪಾಸಣೆ ಶಿಬಿರ 8ರಂದು

ಹುಬ್ಬಳ್ಳಿ: ಬಸವ ಕೇಂದ್ರದ ವತಿಯಿಂದ ಡಿ. 8ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಇಲ್ಲಿಯ ಮುರಾರ್ಜಿ ನಗರದ ಬಸವ ಕೇಂದ್ರದ ವಿ.ಎಂ. ಕೊಟಗಿ ಬಸವ ಸಂಸ್ಕೃತಿ ಶಾಲೆಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ.

ರಕ್ತ ತಪಾಸಣೆ, ರಕ್ತದ ಒತ್ತಡ, ನರರೋಗ, ಹೃದಯರೋಗ, ಮೂತ್ರಪಿಂಡ, ಎಲುಬು-ಕೀಲು, ಸ್ತ್ರೀರೋಗ, ಚಿಕ್ಕಮಕ್ಕಳ, ಚರ್ಮರೋಗ, ಪ್ಲಾಸ್ಟಿಕ್ ಸರ್ಜರಿ, ಮೂತ್ರರೋಗ, ಕ್ಯಾನ್ಸರ್, ಸಾಮಾನ್ಯ ಕಾಯಿಲೆಗಳು ಸೇರಿ ಇತರ ಕಾಯಿಲೆಯುಳ್ಳವರ ತಪಾಸಣೆ ನಡೆಸಲಾಗುವುದು. ಬಸವಕೇಂದ್ರದ ಅಧ್ಯಕ್ಷ ಪ್ರೊ. ಜಿ.ಬಿ. ಹಳ್ಳಾಳ, ಡಾ. ಎಸ್.ಪಿ. ಬಳಿಗಾರ ನೇತೃತ್ವ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.