ಜಿಲ್ಲೆ

ಆರೋಗ್ಯ ತಪಾಸಣಾ ಶಿಬಿರ 22ರಂದು

Dharwada - Vikram Nadiger

ಧಾರವಾಡ: ನಗರದ ಮೆಡಿ ಲ್ಯಾಬ್​ ರಕ್ತ ತಪಾಸಣಾ ಕೇಂದ್ರವು ಆಟೋ ಚಾಲಕರ ಸಂಘ, ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಹಾಗೂ ಚಿರಾಯು ಹೆಲ್ತ್​ ಅವೇರ್ನೆಸ್​ ಆ್ಯಂಡ್​ ರಿಸರ್ಚ್​ ಸೆಂಟರ್​ ಸಹಯೋಗದಲ್ಲಿ ಜು. 22ರಂದು ಆರೋಗ್ಯ ತಪಾಸಣೆ ಉಚಿತ ಶಿಬಿರ ಏರ್ಪಡಿಸಿದೆ.
ಮಾಳಮಡ್ಡಿಯ ಮೆಡಿ ಲ್ಯಾಬ್​ನಲ್ಲಿ ಬೆಳಗ್ಗೆ 7 ಗಂಟೆಯಿಂದ ಆರಂಭವಾಗುವ ಶಿಬಿರದಲ್ಲಿ ಆಟೋ ಚಾಲಕರು ಹಾಗೂ ಕುಟುಂಬಸ್ಥರಿಗೆ ಮಧುಮೇಹ, ರಕ್ತದೊತ್ತಡ, ಹೃದಯ ಪರೀಕ್ಷೆ ನಡೆಸಲಾಗುವುದು. ಎಲ್ಲರೂ ಇದರ ಸದುಪಯೋಗ ಪಡೆಯಬೇಕು ಎಂದು ಪ್ರಕಟಣೆ ತಿಳಿಸಿದೆ.