ಜಿಲ್ಲೆ

ಆರೋಗ್ಯ ತಪಾಸಣಾ ಶಿಬಿರ ಇಂದಿನಿಂದ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಎಸ್​ಡಿಎಂ ವೈದ್ಯಕಿಯ ಕಾಲೇಜು ಹಾಗೂ ಆಸ್ಪತ್ರೆ ವತಿಯಿಂದ ಸ್ವಾತಂತ್ರ್ಯೋತ್ಸವ ನಿಮಿತ್ತ ಇಲ್ಲಿನ ಜುಬಿಲಿ ವೃತ್ತದಲ್ಲಿನ ಎಸ್​ಡಿಎಂ ಪಾಲಿ ಕ್ಲಿನಿಕ್​ನಲ್ಲಿ ಆ. 12ರಿಂದ 3 ದಿನಗಳ ಕಾಲ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1ರವರೆಗೆ ಆರೋಗ್ಯ ತಪಾಸಣಾ ಉಚಿತ ಶಿಬಿರ ಏರ್ಪಡಿಸಲಾಗಿದೆ.
ಆ. 12ರಂದು ಮೆಡಿಸಿನ್​ ಮತ್ತು ಕಣ್ಣಿನ ಪರೀಕ್ಷೆ , ಆ. 13ರಂದು ಸ್ತ್ರೀ ರೋಗ ಮತ್ತು ಮಕ್ಕಳ ತಪಾಸಣೆ, ಆ. 14ರಂದು ಎಲುವು ಸಂಬಂಧಿತ, ಚರ್ಮರೋಗ ಮತ್ತು ಕಿವಿ, ಮೂಗು, ಗಂಟಲಿನ ತಪಾಸಣೆ ನಡೆಸಲಾಗುವುದು. ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆಯಬೇಕು ಎಂದು ಪ್ರಕಟಣೆ ತಿಳಿಸಿದೆ.