ಮಂಡ್ಯ: ತಾಲೂಕಿನ ಹೆಬ್ಬಕವಾಡಿ ಗ್ರಾಮದಲ್ಲಿ ರೋಟರಿ ಇನ್ನರ್‌ವ್ಹೀಲ್ ಸಂಸ್ಥೆ, ಮಂಗಲ ಗ್ರಾಮ ಪಂಚಾಯಿತಿ, ಮಂಗಲ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಮೈಸೂರಿನ ನಾರಾಯಣ ಹೆಲ್ತ್ ವತಿಯಿಂದ ಆರೋಗ್ಯ ಉಚಿತ ತಪಾಸಣಾ ಶಿಬಿರ ನಡೆಯಿತು.
ಶಿಬಿರ ಉದ್ಘಾಟಿಸಿ ಮಾತನಾಡಿದ ರೋಟರಿ ಅಧ್ಯಕ್ಷ ಸಿರಿಭೈರವ ರಾಜಶೇಖರ್, ರೋಟರಿ ಸಂಸ್ಥೆ ನಡೆ ಆರೋಗ್ಯದ ಕಡೆ ಎಂಬ ನಿಟ್ಟಿನಲ್ಲಿ ಪ್ರತಿ ತಿಂಗಳು ಒಂದೊಂದು ಶಿಬಿರಗಳನ್ನು ನಡೆಸುತ್ತಾ ಬರುತ್ತಿದೆ. ಜತೆಗೆ ಪ್ಲಾಸ್ಟಿಕ್ ಮುಕ್ತ ಮಂಡ್ಯ ಮಾಡುವ ನಿಟ್ಟಿನಲ್ಲಿ ಹಲವಾರು ಯೋಜನೆ ರೂಪಿಸಿದೆ. ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ಪ್ಲಾಸ್ಟಿಕ್ ಮುಕ್ತ ಮಾಡುವ ನಮ್ಮ ಯೋಜನೆಗೆ ಸಹಕಾರ ನೀಡುವಂತೆ ಮನವಿ ಮಾಡಿದರು.
ರೋಟರಿ ಸಂಸ್ಥೆ ಕಾರ್ಯದರ್ಶಿ ಲಕ್ಷ್ಮೀ ನಾರಾಯಣ್, ಜೋನ್ ಕಾರ್ಯದರ್ಶಿ ಬರ್ನಾಡಪ್ಪ, ಸಮುದಾಯ ಸೇವೆ ಜಿಲ್ಲಾ ಪ್ರತಿನಿಧಿ ಸಿ.ಪ್ರಶಾಂತ್, ಸದಸ್ಯ ಎಚ್.ಎನ್.ರವಿ, ಇನ್ನರ್‌ವ್ಹೀಲ್ ಅಧ್ಯಕ್ಷೆ ಸುನೀತಾ, ಕಾರ್ಯದರ್ಶಿ ಅನು ಅರುಣ್, ಪುಷ್ಪಲತಾ, ಮಂಗಲ ಗ್ರಾ.ಪಂ ಪಿಡಿಒ ಸಿ.ಕೃಷ್ಣೇಗೌಡ, ಅಧ್ಯಕ್ಷ ಎನ್.ಮಹೇಶ್, ಉಪಾಧ್ಯಕ್ಷೆ ಸಾಕಮ್ಮ, ಸದಸ್ಯರಾದ ಜಗದೀಶ್, ಕೆಂಪಮ್ಮ, ಕೀರ್ತಿಕುಮಾರಿ, ಹೆಬ್ಬಕವಾಡಿ ಡೇರಿ ಅಧ್ಯಕ್ಷ ನಾಗರಾಜು ಇತರರಿದ್ದರು. ಶಿಬಿರದಲ್ಲಿ ಮಂಗಲ, ಹೆಬ್ಬಕವಾಡಿ, ಲೋಕಸರ, ತಿಮ್ಮನಹೊಸೂರು, ಮಾರಸಿಂಗನಹಳ್ಳಿ ಸೇರಿದಂತೆ 250ಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ರಕ್ತ ಪರೀಕ್ಷೆ, ಬಿಪಿ, ಇಸಿಜಿ, ಇನ್ನಿತರೆ ತಪಾಸಣೆ ನಡೆಸಲಾಯಿತು.