ಉಳ್ಳಾಲ: ಬಾಳೆಪುಣಿ ಗ್ರಾಮದ ಮುದುಂಗಾರುಕಟ್ಟೆ ದ.ಕ. ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ಮಾಹಿತಿ ಮತ್ತು ಆರೋಗ್ಯ ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಶುಕ್ರವಾರ ನಡೆಯಿತು.
ಜನಶಿಕ್ಷಣ ಟ್ರಸ್ಟ್, ಶಾಲಾಭಿವೃದ್ಧಿ ಸಮಿತಿ ಹಾಗೂ ಶಾರದಾ ಆಯರ್ವೇದ ವೈದ್ಯಕೀಯ ಕಾಲೇಜು ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಆರೋಗ್ಯ ಶಿಬಿರದಲ್ಲಿ ಡಾ.ಸಹನಾ ಮಾಹಿತಿ ನೀಡಿದರು. ಆಯುರ್ವೇದ ಚಿಕಿತ್ಸೆಯಿಂದ ರೋಗ ಮುಕ್ತರಾಗಿರುವ ಬಗ್ಗೆ ಸದಾನಂದ, ಲತೀಫ್ ಕೋಡಿಜಾಲು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕುಙಾಬಾವು, ಉಪಾಧ್ಯಕ್ಷ ಅಬೂಬಕ್ಕರ್ ಜಲ್ಲಿ, ಅಬ್ದುಲ್ ಖಾದರ್ ಹಾಗೂ ಅಜೀಝ್ ಅನುಭವ ಹಂಚಿಕೊಂಡರು.
ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಶೀನ ಶೆಟ್ಟಿ ಸಂವಾದ ನಿರ್ವಹಿಸಿದರು. ಪಂಚಾಯಿತಿ ಸದಸ್ಯ ಯಾಕೂಬ್ ವಂದಿಸಿದರು. ಸಕ ಶಕ್ಷಕಿ ಯಶೋದಾ, ಆಶಾ ಕಾರ್ಯಕರ್ತೆ ಶಾರದಾ, ಅಡುಗೆ ಸಹಾಯಕಿ ಸುನೀತಾ ಸಹಕರಿಸಿದರು.