ಜಿಲ್ಲೆ

200ಕ್ಕೂ ಅಧಿಕ ಜನರ ಆರೋಗ್ಯ ತಪಾಸಣೆ

ಧಾರವಾಡ: ಇಲ್ಲಿನ ಕೆಲಗೇರಿ ರಸ್ತೆಯ ಸಾನಗರದಲ್ಲಿನ ಶಿರಡಿ ಸಾಯಿಬಾಬಾ ಸಂಸ್ಥೆ ಮತ್ತು ವಿಶ್ವ ಹಿಂದು ಪರಿಷತ್‌ನಿಂದ ಭಾನುವಾರ ಉಚಿತ ಆರೋಗ್ಯ, ಕಣ್ಣು ತಪಾಸಣೆ ಮತ್ತು ರಕ್ತದಾನ ಶಿಬಿರ ಜರುಗಿತು.

ಶಿಬಿರದಲ್ಲಿ ವೈದ್ಯರಾದ ಡಾ.ಚೌಡಪ್ಪ ಶಾಖಾಪುರ, ಡಾ.ನೀಲಕಂಠ ಪಾಟೀಲ, ಡಾ. ಶ್ರುತಿ ಕುಲಕರ್ಣಿ, ಡಾ.ಸೂರಜ್ ಪ್ರಸಾದ, ಡಾ. ಮಾರುತಿ ನಾಗರಲ್ಲಿ, ಡಾ.ಚಿದಾನಂದ ರಾಮನಗೌಡ್ರ ಅವರು 200ಕ್ಕೂ ಅಧಿಕ ಜನರ ಸಾಮಾನ್ಯ ಆರೋಗ್ಯ, ದೃಷ್ಟಿದೋಷ, ಕಣ್ಣು ಪೊರೆ, ಚರ್ಮ ರೋಗ, ಎಲುವು-ಕೀಲು ತಪಾಸಣೆ ನಡೆಸಿದರು.

ರೋಟರಿ ಬ್ಲಡ್ ಬ್ಯಾಂಕ್ ಮತ್ತು ರಾಷ್ಟ್ರೋತ್ಥಾನ ಬ್ಲಡ್ ಬ್ಯಾಂಕ್‌ನಿಂದ ಆಯೋಜಿಸಿದ್ದ ಶಿಬಿರದಲ್ಲಿ ರಕ್ತದಾನ ಮಾಡಿದ 30 ಜನರಿಗೆ ಪ್ರಮಾಣಪತ್ರ ನೀಡಲಾತು.

ಶಿರಡಿ ಸಾಬಾಬಾ ಸಂಸ್ಥೆ, ವಾಸನ್ ಐ ಕೇರ್, ಯುನಿಟಿ ಸ್ಪೆಷಾಲಿಟಿ ಆಸ್ಪತ್ರೆ, ಡಾ.ಎಸ್.ಆರ್.ರಾಮನಗೌಡರ ಆಸ್ಪತ್ರೆ, ಹರೀಶ ಮೆಡಿಲ್ಯಾಬ್ ಸಹಯೋಗದಲ್ಲಿ ಶಿಬಿರ ನಡೆಯಿತು. ಶಿರಡಿ ಸಾಯಿಬಾಬಾ ಸಂಸ್ಥೆಯ ಅಧ್ಯಕ್ಷ ಮಹೇಶ ಶೆಟ್ಟಿ, ವಿಶ್ವ ಹಿಂದು ಪರಿಷತ್ ಜಿಲ್ಲಾ ಅಧ್ಯಕ್ಷ ಡಾ. ಮಹೇಶ ಪಾಟೀಲ, ಕಿರಣ ಶಾ, ಉದಯ ಶೆಟ್ಟಿ, ಸಂತೋಷ ಮಿಕಲಿ, ಪ್ರಕಾಶ ಅಮ್ಮಿನಬಾವಿ, ವಿಪಿನಾನಂದ ಶೆಟ್ಟಿ ಇತರರಿದ್ದರು.