ಜಿಲ್ಲೆ

ಆರೋಗ್ಯವಂತ ಸಮಾಜದಿಂದ ರಾಷ್ಟ್ರ ಬಲಿಷ್ಠ : ಡಾ.ಪುನೀತ್ ಪಕಳ ಹೇಳಿಕೆ

ಸೌಮ್ಯ ಆರ್

ಮೂಡುಬಿದಿರೆ: ಧರ್ಮ, ಕರ್ಮ, ಸಾಧನೆಗಳಿಗೆ ಶರೀರವೇ ಮುಖ್ಯ ಮಾಧ್ಯಮವಾಗಿದ್ದು, ಸದೃಢ, ಆರೋಗ್ಯವಂತ ಸಮಾಜದಿಂದ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ. ರಾಷ್ಟ್ರೀಯ ಸೇವಾ ಯೋಜನೆಯಂತಹ ಕಾರ್ಯಕ್ರಮ, ಆರೋಗ್ಯ ಶಿಬಿರಗಳಂತಹ ಕಾರ್ಯಕ್ರಮ ಆಯೋಜಿಸಿ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯ ಶ್ಲಾಘನೀಯ. ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಕಾರ್ಯ ಸ್ತುತ್ಯರ್ಹ ಎಂದು ಅಲಂಗಾರು ಮೌಂಟ್ ರೋಸರಿ ಆಸ್ಪತ್ರೆ ವೈದ್ಯ ಡಾ.ಪುನೀತ್ ಪಕಳ ಹೇಳಿದರು.

ಮೂಡುಮಾರ್ನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರದ ಪ್ರಯುಕ್ತ ಎಕ್ಸಲೆಂಟ್ ಪದವಿಪೂರ್ವ ಕಾಲೇಜು, ಮೌಂಟ್ ರೋಸರಿ ಆಸ್ಪತ್ರೆ ಸಹಕಾರದೊಂದಿಗೆ ನಡೆದ ಆರೋಗ್ಯ ತಪಾಸಣಾ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ತಜ್ಞ ಡಾ.ಮುಕುಂದ್, ಮೌಂಟ್ ರೋಸರಿ ಆಸ್ಪತ್ರೆ ಮಾನವ ಸಂಪನ್ಮೂಲ ಅಧಿಕಾರಿ ವಿನೀತ್, ಸಾರ್ವಜನಿಕ ಸಂಪರ್ಕಾಧಿಕಾರಿ ಅನಿಲ್, ಶಿಬಿರಾಧಿಕಾರಿ ತೇಜಸ್ವಿ ಭಟ್, ಸಹ ಶಿಬಿರಾಧಿಕಾರಿಗಳಾದ ಪ್ರಶಾಂತ್ ಶೆಟ್ಟಿ, ಡಾ.ವಾದಿರಾಜ ಕಲ್ಲೂರಾಯ, ಪ್ರದೀಪ್ ಕೆ.ಪಿ., ಅಶೋಕ್, ಪ್ರಿಯಾಂಕ, ಸಂಧ್ಯಾ ಕುಮಾರಿ, ಸೌಮ್ಯಾ ಉಪಸ್ಥಿತರಿದ್ದರು.