ಗುಡುಗಳಲೆ ಜಾನುವಾರು ಜಾತ್ರೆ ಮುಕ್ತಾಯ ದಿನದ ಅಂಗವಾಗಿ ನಡೆದ ಆರೋಗ್ಯ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದರು.  
ಜಿಲ್ಲೆ

ಗುಡುಗಳಲೆ ಜಾತ್ರೆಯಲ್ಲಿ ಆರೋಗ್ಯ ತಪಾಸಣೆ

ಶನಿವಾರಸಂತೆ: ಗುಡುಗಳಲೆ ಜಯದೇವ ಜಾನುವಾರು ಜಾತ್ರೆಯ ಕೊನೇ ದಿನದ ಅಂಗವಾಗಿ ಶುಕ್ರವಾರ ಸ್ವಯಂ ಪ್ರೇರಿತ ರಕ್ತದಾನ ಹಾಗೂ ಉಚಿತ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಗುಡುಗಳಲೆ ಜಯದೇವ ಜಾನುವರು ಜಾತ್ರಾ ಸಮಿತಿ ಮತ್ತು ಶನಿವಾರಸಂತೆಯ ಚೇತನ್ ಡಯಾಗ್ನೋಸ್ಟಿಕ್ ಲ್ಯಾಬೊರೇಟರಿ ಹಾಗೂ ಚನ್ನರಾಯಪಟ್ಟಣದ ಜನಪ್ರಿಯ ರಕ್ತ ಶೇಖರಣಾ ಕೇಂದ್ರ, ಚನ್ನರಾಯಪಟ್ಟಣ ಸ್ವಯಂ ಪ್ರೇರಿತ ರಕ್ತ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ರಕ್ತದಾನ ಮತ್ತು ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಶಿಬಿರದಲ್ಲಿ ಚನ್ನರಾಯಪಟ್ಟಣ ಸ್ವಯಂ ಪ್ರೇರಿತ ರಕ್ತ ಕೇಂದ್ರ ಮತ್ತು ಕಣ್ಣಿನ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ಬಿ.ಸಾಕ್ಷಿ, ಡಾ.ಉಮರ್ ಫರೂಖ್ ನೇತೃತ್ವದಲ್ಲಿ ಸಿಬ್ಬಂದಿ ಶೈಫಾ ಫೈಬೀನಾ, ಸಿಬ್ರನ್ ಬಾನು ಕಣ್ಣಿನ ಪರೀಕ್ಷೆ ನಡೆಸಿದರು. ಶಿಬಿರದಲ್ಲಿ ಲ್ಯಾಬ್ ಟೆಕ್ನಿಷಿಯನ್ ವಿಭಾಗದ ಸಿಬ್ಬಂದಿ ಭರತ್, ಚೈತ್ರಾ, ಹೇಮಾ, ಭುವನಾ, ಪ್ರಜ್ವಲ್, ಮಾನಸಾ, ಚೇತನ್ ರೋಗಿಗಳ ತಪಾಸಣೆ ನಡೆಸಿದರು.

ಶಿಬಿರದ ಪ್ರಾಯೋಜಕ ಶನಿವಾರಸಂತೆ ಚೇತನ್ ಡಯಾಗ್ನೋಸ್ಟಿಕ್‌ನ ಚೇತನ್, ಜಾತ್ರಾ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.