ಜಿಲ್ಲೆ

ಆರೋಗ್ಯ ಜಾಗೃತಿಗೆ ಶಿಬಿರಗಳು ಸಹಕಾರಿ

ಬೆಟ್ಟದಪುರ: ಉತ್ತಮ ಆರೋಗ್ಯಕ್ಕಾಗಿ ಗುಣಮಟ್ಟದ ಆಹಾರ ಸೇವಿಸಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕಿ ಲೀಲಾವತಿ ಸಲಹೆ ನೀಡಿದರು.


ಬೆಟ್ಟದಪುರ ಸಮೀಪದ ಹರದೂರು ಗ್ರಾಮದಲ್ಲಿ ಯೋಜನೆಯ ಸ್ತ್ರೀಶಕ್ತಿ ಜ್ಞಾನ ವಿಕಾಸ ಕೇಂದ್ರದಿಂದ ಸೋಮವಾರ ಆಯೋಜಿಸಿದ್ದ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷೃ ತೋರದೆ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.


ವಲಯ ಮೇಲ್ವಿಚಾರಕ ಹೇಮಂತ್, ಡಾ.ಚೇತನ್, ಡಾ.ಸಪ್ನಾ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾಮಾಕ್ಷಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಮಿತಾ, ಸೇವಾಪ್ರತಿನಿಧಿ ಜ್ಯೋತಿ ಇದ್ದರು.