ಜಿಲ್ಲೆ

ವಿಆರ್ ಎಲ್ ಸಂಸ್ಥೆಯಲ್ಲಿ ಆರೋಗ್ಯ ತಪಾಸಣೆ ಶಿಬಿರ

Dharwada - Basavaraj Idli

ಹುಬ್ಬಳ್ಳಿ: ಲಯನ್ಸ್ ಕ್ಲಬ್ ಆಫ್ ಹುಬ್ಬಳ್ಳಿ ಸಿಟಿ ವತಿಯಿಂದ ನಗರದ ಜಯಪ್ರಿಯಾ ಕಣ್ಣಿನ ಆಸ್ಪತ್ರೆ ಹಾಗೂ ಸೆಕ್ಯೂರ್ ಹಾಸ್ಪಿಟಲ್ ಸಹಯೋಗದಲ್ಲಿ ತಾಲೂಕಿನ ವರೂರಿನ ವಿಆರ್ ಎಲ್ ಲಾಜಿಸ್ಟಿಕ್ಸ್ ಆವರಣದಲ್ಲಿ ಬುಧವಾರ ಉಚಿತ ನೇತ್ರ ಹಾಗೂ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು.

ಸುಮಾರು 2 ಸಾವಿರ ಸಿಬ್ಬಂದಿ ಶಿಬಿರದ ಪ್ರಯೋಜನ ಪಡೆದರು. ಕ್ಯಾಟರ್ಯಾಕ್ಟ್ ಹಾಗೂ ಇತರ ಕಣ್ಣಿನ ಸಮಸ್ಯೆ ಇರುವವರಿಗೆ ಸಲಹೆ ನೀಡಲಾಯಿತು. ರಕ್ತದೊತ್ತಡ ಹಾಗೂ ಮಧುಮೇಹ, ಹೃದಯ ತಪಾಸಣೆ ಮಾಡಲಾಯಿತು. ಅಗತ್ಯ ಇರುವವರಿಗೆ ಇಸಿಜಿ, ಎಕೋ ಮುಂತಾದ ಪರೀಕ್ಷೆಗಳನ್ನು ನಡೆಸಲಾಯಿತು.

ವಿಜಯಾನಂದ ಟ್ರಾವೆಲ್ಸ್ ಪ್ರೈವೇಟ್ ಲಿಮಿಟೆಡ್ ಎಂಡಿ ಶಿವಾ ಸಂಕೇಶ್ವರ ಅವರು ಶಿಬಿರ ಉದ್ಘಾಟಿಸಿ ಮಾತನಾಡಿ, ಕಣ್ಣು ಮನುಷ್ಯನ ದೇಹದ ಸೂಕ್ಷ್ಮ ಅಂಗವಾಗಿದೆ. ಇದನ್ನು ಸಂರಕ್ಷಣೆ ಮಾಡಬೇಕು. ದೃಷ್ಟಿಯಲ್ಲಿ ಏನಾದರೂ ತೊಂದರೆ ಇದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬೇಕು. ಸಿಬ್ಬಂದಿಯು ಆರೋಗ್ಯದ ಬಗ್ಗೆ ಸದಾ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.

ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲಾ ಗವರ್ನರ್ ಮನೋಜ ಮನೇಕ್, ಕಾರ್ಯದರ್ಶಿ ವಿನೋದ ಜೈನ್, ಅತುಲ್ ಬಹೇತಿ, ಹುಬ್ಬಳ್ಳಿ ಸಿಟಿ ಅಧ್ಯಕ್ಷ ಪ್ರಕಾಶ ಸರಾಫ್, ಕಾರ್ಯದರ್ಶಿ ಸಚಿನ್ ಬೇಂದ್ರೆ, ಖಜಾಂಚಿ ಸುಜಿತ್ ಹಕ್ಕಾಪಕ್ಕಿ, ಡಾ. ದತ್ತಾತ್ರೇಯ ಜಲ್ದೆ, ಎಸ್.ಜಿ. ಪಾಟೀಲ, ಇತರರು ಉಪಸ್ಥಿತರಿದ್ದರು.