ಜಿಲ್ಲೆ

ಮಣಕವಾಡದಲ್ಲಿ 22ರಂದು ಆರೋಗ್ಯ ತಪಾಸಣೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಶ್ರೀ ಬಾಲಾಜಿ ನರರೋಗ ಆಸ್ಪತ್ರೆ ಮತ್ತು ತುರ್ತು ಚಿಕಿತ್ಸಾ ಕೇಂದ್ರ ಹಾಗೂ ಅಣ್ಣಿಗೇರಿ ತಾಲೂಕು ಸುಕ್ಷೇತ್ರ ಮಣಕವಾಡದ ಶ್ರೀಗುರು ಅನ್ನದಾನೀಶ್ವರ ದೇವಮಂದಿರ ಮಹಾಮಠ ಇವರ ಸಂಯುಕ್ತಾಶ್ರಯದಲ್ಲಿ ಸೆ. 22ರಂದು ಬೆಳಗ್ಗೆ 10ಕ್ಕೆ ಮಠದ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ.

ಅಭಿನವ ಶ್ರೀ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬಾಲಾಜಿ ಆಸ್ಪತ್ರೆ ಚೇರ್ಮನ್ ಡಾ. ಕ್ರಾಂತಿಕಿರಣ ಶಿಬಿರದ ನೇತೃತ್ವ ವಹಿಸಲಿದ್ದಾರೆ.

ನರರೋಗ, ಎಲುಬು-ಕೀಲು, ಹೃದ್ರೋಗಕ್ಕೆ ಸಂಬಂಧಿಸಿದ ಖ್ಯಾತ ವೈದ್ಯರು ತಪಾಸಣೆ ಮಾಡಲಿದ್ದು, ಬೋನ್ ಡೆನ್ಸಿಟಿ, ರಕ್ತದೊತ್ತಡ, ಮಧುಮೇಹ ತಪಾಸಣೆ ಮಾಡಿ ಉಚಿತ ಸಲಹೆ, ಔಷಧ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.