ಹುಬ್ಬಳ್ಳಿ: ಇಲ್ಲಿಯ ಬಾಲಾಜಿ ನರರೋಗ ಆಸ್ಪತ್ರೆ, ತುರ್ತು ಚಿಕಿತ್ಸಾ ಕೇಂದ್ರ ಹಾಗೂ ಕುಂದಗೋಳದ ತ್ರಿವಿಧ ದಾಸೋಹಿ ಶ್ರೀ ಬಸವಣ್ಣಜ್ಜನವರ ಕಲ್ಯಾಣಪುರಮಠದ ಸಂಯುಕ್ತಾಶ್ರಯದಲ್ಲಿ ಆ. 25ರಂದು ಬೆಳಗ್ಗೆ 10ಕ್ಕೆ ಕುಂದಗೋಳದ ಕಲ್ಯಾಣಪುರಮಠ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ.
ಶ್ರೀ ಅಭಿನವ ಬಸವಣ್ಣಜ್ಜನವರು ಸಾನ್ನಿಧ್ಯ ವಹಿಸಲಿದ್ದು, ಬಾಲಾಜಿ ಆಸ್ಪತ್ರೆ ಚೇರ್ಮನ್ ಡಾ. ಕ್ರಾಂತಿಕಿರಣ ಶಿಬಿರದ ನೇತೃತ್ವ ವಹಿಸಲಿದ್ದಾರೆ.
ನರರೋಗ, ಎಲುಬು-ಕೀಲು, ಹೃದ್ರೋಗಕ್ಕೆ ಸಂಬಂಧಿಸಿದ ವೈದ್ಯರು ತಪಾಸಣೆ ನಡೆಸುವರು.
ಬೋನ್ ಡೆನ್ಸಿಟಿ, ರಕ್ತದೊತ್ತಡ, ಸಕ್ಕರೆ ಕಾಯಿಲೆ ತಪಾಸಣೆ ಮಾಡಿ ಉಚಿತ ಸಲಹೆ, ಔಷಧ ನೀಡಲಾಗುವುದು.