ಜಿಲ್ಲೆ

ಇಂದು ಕೈವಾರದಲ್ಲಿ ಆರೋಗ್ಯ ಶಿಬಿರ

ಎನ್.ವೆಂಕಟೇಶ್

ಚಿಂತಾಮಣಿ: ತಾಲೂಕಿನ ಕೈವಾರ ಪ್ರಾಥಮಿಕ ಆರೋಗ್ಯ ಕೇಂದ್ರ, ಎಂ.ಎಸ್​.ರಾಮಯ್ಯ ವೈದ್ಯಕಿಯ ಮಹಾ ವಿದ್ಯಾಲಯದ ಸಮುದಾಯ, ಬೆಂಗಳೂರು ವೈದ್ಯಕಿಯ ಆರೋಗ್ಯ ವಿಭಾಗ, ಮನೋವೈದ್ಯ ಶಾಸ್ತ್ರ ವಿಭಾಗ, ವೈದ್ಯ ಶಾಸ್ತ್ರ ವಿಭಾಗದ ಸಹಯೋಗದಲ್ಲಿ ಸೆ.22 ರಂದು ಕೈವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಉಚಿತ ಬೃಹತ್​ ಆರೋಗ್ಯ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸ ಶಿಬಿರವನ್ನು ಮುಂಜಾನೆ 11ರಿಂದ ಮಧ್ಯಾಹ್ನ 1 ಗಂಟೆವರೆಗೆ ಹಮ್ಮಿಕೊಳ್ಳಲಾಗಿದ್ದು, ತಜ್ಞ ವೈದ್ಯರು ಶಿಬಿರದಲ್ಲಿ ಭಾಗವಹಿಸಲಿದ್ದಾರೆ ಎಂದು ಎಂ.ಎಸ್​.ರಾಮಯ್ಯ ವೈದ್ಯಕಿಯ ಮಹಾವಿದ್ಯಾಲಯದ ತಿಳಿಸಿದೆ.