ಜಿಲ್ಲೆ

ಜನರ ಅನುಕೂಲಕ್ಕೆ ಆರೋಗ್ಯ ಕ್ಯಾಂಪ್

ಕುಂದಾಪುರ: ಗ್ರಾಮೀಣ ಭಾಗದ ಜನರಿಗೆ ದೂರದ ಆಸ್ಪತ್ರೆಗೆ ಹೋಗಲು ಕಷ್ಟವಾಗುತ್ತದೆ ಎಂಬ ಉದ್ದೇಶದಿಂದ ಸಾರ್ವಜನಿಕರಿಗೆ ಅನುಕೂಲವಾಗಲು ಸರ್ಕಾರ ಉಚಿತ ಆರೋಗ್ಯ ಕ್ಯಾಂಪ್‌ಗಳನ್ನು ನಡೆಸುತ್ತಿದ್ದು, ಎಲ್ಲರೂ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕುಂದಾಪುರ ತಾಲೂಕು ಆರೋಗ್ಯ ಅಧಿಕಾರಿ ಡಾ.ಕೆ.ಪ್ರೇವಾನಂದ ಹೇಳಿದರು.

ಕಾಲ್ತೋಡು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ಆವರಣದಲ್ಲಿ ಶುಕ್ರವಾರ ಆಯುಷ್ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್ ಇಲಾಖೆೆ, ಕಾಲ್ತೋಡು ಗ್ರಾಮ ಪಂಚಾಯಿತಿ, ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಕಾಲ್ತೋಡು, ಆಯುಷ್ಮಾನ್ ಆರೋಗ್ಯ ಮಂದಿರ (ಆಯುಷ್) ಕಾಲ್ತೋಡು, ಪ್ರಾಥಮಿಕ ಆರೋಗ್ಯ ಕೇಂದ್ರ ಕಿರಿಮಂಜೇಶ್ವರ, ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಶಿರೂರು ಮುದ್ದುಮನೆ ಸಂಯುಕ್ತ ಆಶ್ರಯದಲ್ಲಿ ನಡೆದ ಆರೋಗ್ಯ ಶಿಬಿರ ಉದ್ಘಾಟಿಸಿ ವಾತನಾಡಿದರು.

ಕಾಲ್ತೋಡು ಗ್ರಾಪಂ ವಾಜಿ ಅಧ್ಯಕ್ಷ ಬಟ್ನಾಡಿ ಅಣ್ಣಪ್ಪ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನೇತ್ರತಜ್ಞೆ ಡಾ.ರಶ್ಮಿ ಅವರು ಕಣ್ಣಿನ ಸಾವಾನ್ಯ ಕಾಯಿಲೆಗಳ ಬಗ್ಗೆ ವಿವರಿಸಿದರು.

ಕಾಲ್ತೋಡು ಗ್ರಾಪಂ ಸದಸ್ಯ ಚಿಕ್ಕಯ್ಯ ಶೆಟ್ಟಿ, ಶಿರೂರು ಮುದ್ದುಮನೆ ಆಸ್ಪತ್ರೆ ಪಿಆರ್‌ಒ ಶಂಕರ ಶೆಟ್ಟಿ, ನಾವುಂದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ವೈದ್ಯಾಧಿಕಾರಿ ಡಾ.ವಿನಯಾ, ಪ್ರಾಥಮಿಕ ಕಿರಿಮಂಜೇಶ್ವರ ಆರೋಗ್ಯ ಕೇಂದ್ರದ ಸಿಎಚ್‌ಒ ರಕ್ಷಿತಾ, ಪಿಎಚ್‌ಸಿಒ ಪ್ರತಿವಾ, ಆಯುಷ್ಮಾನ್ ಆರೋಗ್ಯ ಮಂದಿರದ ಸಿಬ್ಬಂದಿ ಸರಸ್ವತಿ, ನಾಗದೀಪ, ವಿಶಾಲಾ, ಮಣಿಕಂಠ ಉಪಸ್ಥಿತರಿದ್ದರು. -ಕಾಲ್ತೋಡು ಆಯುಷ್ ಆಸ್ಪತ್ರೆ ವೈದ್ಯಾಧಿಕಾರಿ ಡಾ.ವೀಣಾ ಕಾರಂತ್ ಕಾರ್ಯಕ್ರಮ ನಿರ್ವಹಿಸಿದರು. https://www.vijayavani.net/the-roof-of-the-canteen-was-blown-away-by-the-wind-and-rain https://www.vijayavani.net/a-meaningful-step-by-shantiniketan-souharda-cooperative