ಜಿಲ್ಲೆ

ಹೈಪೋಥೈರಾಯ್ಡ್​ ತಪಾಸಣೆ ಶಿಬಿರ

ಹುಬ್ಬಳ್ಳಿ: ಇಲ್ಲಿಯ ಹೆಗ್ಗೇರಿ ಆಯುರ್ವೇದ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯಲ್ಲಿ ಕೂದಲು ಉದರುವಿಕೆ, ಮಲಬದ್ಧತೆ, ಸುಸ್ತಾಗುವುದು, ದೇಹ ತೂಕ ಹೆಚ್ಚುವುದು, ಮುಟ್ಟಿನಲ್ಲಿ ಏರುಪೇರು, ಮುಖ ಭಾವು ಬರುವುದು ಹಾಗೂ ಹೈಪೋಥೈರಾಯ್ಡ್ ಸಮಸ್ಯೆಯಿಂದ ಬಳಲುವ ಮಹಿಳಾ ರೋಗಿಗಳಿಗಾಗಿ ಜೂನ್ 16ರಿಂದ 21ರ ವರೆಗೆ ಬೆಳಗ್ಗೆ 9ಕ್ಕೆ ವಿಶೇಷ ಸಲಹಾ ಹಾಗೂ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ.

ಸಾರ್ವಜನಿಕರು ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಲು ಆಯುರ್ವೇದ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಪ್ರಶಾಂತ್ ಎ.ಎಸ್. ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.