ಬಸವಮಾರ್ಗ ವ್ಯಸನಮುಕ್ತ ಹಾಗೂ ಪುನರ್ವಸತಿ ಕೇಂದ್ರದಿಂದ ಆಯೋಜಿಸಿರುವ 10 ದಿನಗಳ ಸಂಪೂರ್ಣ ಉಚಿತ ಕುಡಿತ ಬಿಡಿಸುವ ಶಿಬಿರದ ಅಂಗವಾಗಿ ಶುಕ್ರವಾರ ಹೆಬ್ಬಾಳಿನ ಶಾಖೆಯಲ್ಲಿ ಉಚಿತ ಆರೋಗ್ಯ ಶಿಬಿರ ತಪಾಸಣೆ ಆಯೋಜಿಸಲಾಗಿತ್ತು.
ನಗರದ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ತಜ್ಞರು ವ್ಯಸನಿಗಳ ತಪಾಸಣೆ ಮಾಡಿದರು. ಅವರ ಆರೋಗ್ಯದ ಬಗ್ಗೆ ಅಗತ್ಯ ಮಾರ್ಗದರ್ಶನ ನೀಡಿದರು. ಇದಕ್ಕೂ ಮುನ್ನ ಶಿಬಿರಕ್ಕೆ ಬಸವಮಾರ್ಗ ಸಂಸ್ಥೆ ಮುಖ್ಯಸ್ಥ ಬಸವಣ್ಣ ಚಾಲನೆ ನೀಡಿದರು.
ವೈದ್ಯರಾದ ಡಾ. ಶ್ವೇತಾ, ಡಾ.ಲಲಿತಾ, ಡಾ.ಐಶ್ವರ್ಯಾ ಹಾಗೂ ಡಾ.ಹರ್ಷಿತಾ ಇತರರು ಇದ್ದರು.