ಜಿಲ್ಲೆ

ಬ್ಯಾಂಕರ್ಸ ಭವನದಲ್ಲಿ ಆರೋಗ್ಯ ಶಿಬಿರ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಬ್ಯಾಂಕರ್ಸ್ ಕ್ಲಬ್ ಹಾಗೂ ರೋಟರಿ ಕ್ಲಬ್ ಧಾರವಾಡ ಇವರ ಸಹಯೋಗದೊಂದಿಗೆ ಅ. 20ರಂದು ಬೆಳಗ್ಗೆ 10ಕ್ಕೆ ವಿದ್ಯಾನಗರ ಶಿರೂರ ಪಾರ್ಕ್ ಚೇತನಾ ಕಾಲೇಜ್ ಬಳಿಯ ಬ್ಯಾಂಕರ್ಸ್ ಭವನದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿದೆ.

ತಜ್ಞ ವೈದ್ಯರಾದ ಡಾ. ಅಭಿಷೇಕ ಗುಮಾಸ್ತೆ ಹಾಗೂ ಡಾ. ಲಕ್ಷ್ಮೀ ಬಿ.ಆರ್. ಗುಮಾಸ್ತೆ ಶಿಬಿರ ನಡೆಸುವರು. ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆಯುವಂತೆ ಬ್ಯಾಂಕರ್ಸ್ ಕ್ಲಬ್ ಅಧ್ಯಕ್ಷ ಡಾ. ಡಿ.ಜಿ. ಶೆಟ್ಟಿ ಕೋರಿದ್ದಾರೆ.