ಜಿಲ್ಲೆ

ಇಎನ್ ಟಿ ತಪಾಸಣೆ ಶಿಬಿರ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಕೋಯಿನ್ ರಸ್ತೆಯಲ್ಲಿರುವ ಕೆಎಲ್ಇ ಕೋ-ಆಪರೇಟಿವ್ ಆಸ್ಪತ್ರೆಯಲ್ಲಿ ಫೆ. 15ರಂದು ಬೆಳಗ್ಗೆ 10ಕ್ಕೆ ಕಿವಿ, ಮೂಗು, ಗಂಟಲಿನ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಟಾನ್ಸಿಲ್ (ಗಲಗ್ರಂಥಿ) ಗಳಿಗೆ ಸಂಬಂಧಿಸಿದ ರೋಗದ ತಪಾಸಣೆ ಮಾಡಲಾಗುವುದು. ಆಸಕ್ತರು ಆಧಾರ ಕಾರ್ಡ್ ನೊಂದಿಗೆ ಆಗಮಿಸಲು ಕೋರಲಾಗಿದೆ.

ಅಸ್ತಮಾ ಚಿಕಿತ್ಸೆ: ದೀರ್ಘಕಾಲದ ಕೆಮ್ಮು, ಧಮ್ಮು ಮತ್ತು ಎದೆ ಬಿಗಿತದ ತೊಂದರೆ ಇದ್ದಲ್ಲಿ ಚಿಕಿತ್ಸೆಗೆ ಸಂಬಂಧಿಸಿದ ನುರಿತ ಶ್ವಾಸಕೋಶ ತಜ್ಞರಿಂದ ಪ್ರತಿದಿನ ಆರೋಗ್ಯ ತಪಾಸಣೆ ನಡೆಸಲಾಗುವುದು.

ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆಯಬೇಕೆಂದು ಕೆಎಲ್ಇ ಜೆ.ಜಿ.ಎಂ.ಎಂ. ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಾ. ಎಂ.ಜಿ. ಹಿರೇಮಠ ಮತ್ತು ಹುಬ್ಬಳ್ಳಿ ಕೋ-ಆಪರೇಟಿವ್ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ವೈ.ಎಫ್. ಹಂಜಿ ಪ್ರಕಟಣೆಯಲ್ಲಿ ಕೋರಿದ್ದಾರೆ.