ಹುಬ್ಬಳ್ಳಿ: ಇಲ್ಲಿಯ ನವನಗರದ ಆರಾಧನಾ ಮಹಿಳಾ ವೃಂದದ ವತಿಯಿಂದ ಗಂಗಾಧರನಗರ ಶ್ರೀ ತುಳಜಾಭವಾನಿ ಮಂದಿರದ 10ನೇ ವಾರ್ಷಿಕೋತ್ಸವ ಅಂಗವಾಗಿ ಸಹೋದರಿ ನಿವೇದಿತಾ ಪ್ರತಿಷ್ಠಾನ, ಭಾವಸಾರ ಕ್ಷತ್ರಿಯ ಸಮಾಜದ ಸಹಯೋಗದಲ್ಲಿ ಹಲ್ಲಿನ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಅ. 6ರಂದು ಸಂಜೆ 6ಕ್ಕೆ ಏರ್ಪಡಿಸಲಾಗಿದೆ.
ಡಾ. ಮನೋಜ ಭಟ್ಟ ಅವರು ತಪಾಸಣೆ ನಡೆಸುವರು. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕೆಂದು ವೃಂದದ ಅಧ್ಯಕ್ಷೆ ಸುಮಾ ದೇಸಾಯಿ, ಕಾರ್ಯದರ್ಶಿ ಶ್ರೀನಿಧಿ ದೇಶಪಾಂಡೆ ಕೋರಿದ್ದಾರೆ.