ಹುಬ್ಬಳ್ಳಿ: ಇಲ್ಲಿಯ ಎಂ.ಬಿ. ಹುರಳಿಕೊಪ್ಪಿ ಟ್ರಸ್ಟ್, ಅಶೋಕಾ ಮಲ್ಟಿ ಸ್ಪೆಷಾಲಿಟಿ ಹಾಗೂ ಕಣ್ಣಿನ ಆಸ್ಪತ್ರೆ ಹಾಗೂ ಶ್ರೇಯಾ ಆಪ್ಟಿಕಲ್ಸ್, ರೋಟರಿ ಕ್ಲಬ್ ಆ್ ಹುಬ್ಬಳ್ಳಿ ಸೆಂಟ್ರಲ್, ಶ್ರೇಯಾ ಜನಸೇವಾ ಫೌಂಡೇಷನ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಜುಲೈ 29ರಂದು ಬೆಳಗ್ಗೆ 10ಕ್ಕೆ ಅಶೋಕಾ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ.
ನುರಿತ ತ ವೈದ್ಯರಿಂದ ರೋಗಿಗಳ ತಪಾಸಣೆ ನಡೆಯಲಿದೆ. ಎಲುಬು ಕೀಲು, ಸಂಧುಗಳು, ಪಿಜಿಯೋಥೆರಪಿ ಮತ್ತು ಕಣ್ಣಿನ ಸಮಸ್ಯೆ ಇರುವವರು ಶಿಬಿರದಲ್ಲಿ ಪಾಲ್ಗೊಳ್ಳಬಹುದು.
ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಅಶೋಕಾ ಕಣ್ಣಿನ ಆಸ್ಪತ್ರೆ ಸಾರ್ವಜನಿಕ ಸಂಪರ್ಕ ಅಧಿಕಾರಿ ವೃಷಭ ಮುಗಳಿ ಪ್ರಕಟಣೆಯಲ್ಲಿ ಕೋರಿದ್ದಾರೆ.