ಜಿಲ್ಲೆ

ಆರೋಗ್ಯ ತಪಾಸಣೆ ಶಿಬಿರ

Dharwada - Basavaraj Idli

ಹುಬ್ಬಳ್ಳಿ: ಶಿಕ್ಷಣ ಹಾಗೂ ಸಾಮಾಜಿಕ ಚಿಂತಕ, ಶ್ರೀ ಬಸವೇಶ್ವರ ರೂರಲ್ ಎಜುಕೇಶನ್ ಮತ್ತು ಡೆವಲಪ್ಮೆಂಟ್ ಟ್ರಸ್ಟ್ ಕಾರ್ಯದಶಿರ್ ಡಾ. ಶರಣಪ್ಪ ಎಂ. ಕೊಟಗಿ ಅವರ 58ನೇ ಜನ್ಮದಿನ ನಿಮಿತ್ತ ಜು. 22ರಂದು ಬೆಳಗ್ಗೆ 10 ಗಂಟೆಗೆ ಧಾರವಾಡದ ಸತ್ತೂರಿನ ಶ್ರೀ ಸತ್ಯಸಾಯಿ ಕಾಲೇಜ್ ಆ್ ಹೋಮಿಯೋಪಥಿಕ್ ಮೆಡಿಕಲ್ ಸೈನ್ಸ್ ಮತ್ತು ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ ಎಂದು ಟ್ರಸ್ಟಿ ನಾಗರಾಜ ಕೊಟಗಿ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಶೋಕ ಕಣ್ಣಿನ ಆಸ್ಪತ್ರೆ, ಶ್ರೇಯಾ ಆಸ್ಪತ್ರೆ, ಕಾರಟಗಿ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್, ಪ್ರೇಮಬಿಂದು ರಕ್ತನಿಧಿ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ಶಿಬಿರ ನಡೆಯಲಿದ್ದು, ವಿವಿಧ ಕಾಯಿಲೆಗಳಿಗೆ ಸಂಬಂಧಿಸಿದ ತಜ್ಞ ವೈದ್ಯರು ರೋಗಿಗಳ ತಪಾಸಣೆ ನಡೆಸುವರು ಎಂದರು.

ಸುಳ್ಳದ ಪಂಚಗ್ರಹ ಹಿರೇಮಠದ ಶ್ರೀ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯುವ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ವಹಿಸುವರು ಎಂದು ತಿಳಿಸಿದರು.

ಹಿರಿಯ ಕಾಂಗ್ರೆಸ್ ಮುಖಂಡ ಶಾಂತಣ್ಣ ಕಡಿವಾಲ, ಕೆಪಿಸಿಸಿ ಕಾಮಿರ್ಕ ವಿಭಾಗದ ಉಪಾಧ್ಯಕ್ಷ ವೆಂಕನಗೌಡ ಪಾಟೀಲ ಮಾತನಾಡಿ, ಬಡ ರೋಗಿಗಳ ಅನುಕೂಲಕ್ಕಾಗಿ ಕೊಟಗಿ ಅವರು ಶಿಬಿರ ಆಯೋಜಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.