ಶಿರಸಿ: ಆರೋಗ್ಯ ಸುಧಾರಣೆಗೆ ತಪಾಸಣೆ ಮತ್ತು ಜಾಗೃತಿ ಅವಶ್ಯಕ ಎಂದು ಮಾರಿಕಾಂಬಾ ಆಸ್ಪತ್ರೆಯ ಡಾ. ಮಮತಾ ಹೆಗಡೆ ಹೇಳಿದರು.
ತಾಲೂಕಿನ ಬೆಂಗಳೆಯಲ್ಲಿ ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಇಂಡಿಯನ್ ಕ್ಯಾನ್ಸರ್ ಸೊಸೈಟಿ ಹಾಗೂ ಅಸ್ಮಿತೆ ಫೌಂಡೇಶನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕ್ಯಾನ್ಸರ್ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದರು. ಮುಂಜಾಗ್ರತ ಕ್ರಮವಾಗಿ ಸ್ತನ ಕ್ಯಾನ್ಸರ್ ಮತ್ತು ಗರ್ಭಕೋಶ ಕೊರಳಿನ ಕ್ಯಾನ್ಸರ್ ಹಾಗೂ ಬಾಯಿ ಕ್ಯಾನ್ಸರ್ ಪರೀಕ್ಷೆಯನ್ನು ಮಾಡಿಸಿಕೊಂಡು ಮುಂಚಿತವಾಗಿ ಲಕ್ಷಣಗಳನ್ನು ಪತ್ತೆ ಹಚ್ಚಿದರೆ ಗುಣಪಡಿಸಿಕೊಳ್ಳಲು ಸಾಧ್ಯವಿದೆ ಎಂದರು.
ಮುಖ್ಯ ಅತಿಥಿ ಯೋಜನಾಧಿಕಾರಿ ರಾಘವೇಂದ್ರ ನಾಯ್ಕ ಮಾತನಾಡಿ, ಆರೋಗ್ಯವೇ ಭಾಗ್ಯ, ದಿನನಿತ್ಯ ಜೀವನದಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಹೊಣೆ ಎಂದರು. ಅಸ್ಮಿತೆ ಫೌಂಡೇಶನ್ ಕಾರ್ಯನಿರ್ವಾಹಕ ಡಾ. ರಿಯಾಜ್ ಸಾಗರ ಅವರು ಆರೋಗ್ಯ ಜಾಗೃತಿ ಮತ್ತು ತಪಾಸಣೆಯ ಮಹತ್ವ ಕುರಿತು ತಿಳಿಸಿದರು.
ಸುಗಾವಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲ ಚಲವಾದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ. ಸೌಭಾಗ್ಯ, ಡಾ. ಅರವಿಂದ್, ಐಕ್ಯೂರ್ ಸಂಸ್ಥೆಯ ಸಿಬ್ಬಂದಿ ಗಾಯತ್ರಿ, ವೀಣಾ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಮಲ್ಲಿಕಾ ಶೆಟ್ಟಿ, ಅಸ್ಮಿತೆ ಫೌಂಡೇಶನ್ ಸಿಬ್ಬಂದಿ ರೋಹಿಣಿ ಸೈಲ್ ಹಾಗೂ ವಿದ್ಯಾ ಗಾಂವ್ಕರ್ ಸೇವಾಪ್ರತಿನಿಧಿಯಾದ ಲಕ್ಷ್ಮೀ, ಬೆಂಗಳೆ ಒಕ್ಕೂಟದ ಅಧಕ್ಷೆ ಮಮತಾ, ಹಾಗೂ ಪದಾಧಿಕಾರಿಗಳು ಇದ್ದರು. ಆರೋಗ್ಯ ತಪಾಸಣಾ ಶಿಬಿರದಲ್ಲಿ ಸುಮಾರು 100 ಕ್ಕೂ ಹೆಚ್ಚು ಜನ ಪ್ರಯೋಜನ ಪಡೆದುಕೊಂಡರು.