ಜಿಲ್ಲೆ

ಅನುಕೂಲಕ್ಕಾಗಿ ಆರೋಗ್ಯ ಕೇಂದ್ರ ಪ್ರಾರಂಭ: ಶಾಸಕ ರವಿಕುಮಾರ್ ಗಣಿಗ ಹೇಳಿಕೆ

ಮಂಡ್ಯ: ತಾಲೂಕಿನ ಹನಗನಹಳ್ಳಿ ಹಾಗೂ ರಾಯಶೆಟ್ಟಿಪುರ ಗ್ರಾಮದಲ್ಲಿ ತಲಾ 65 ಲಕ್ಷ ರೂ ವೆಚ್ಚದಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರ ನಿರ್ಮಾಣ ಕಾಮಗಾರಿಗೆ ಶಾಸಕ ರವಿಕುಮಾರ್ ಗಣಿಗ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಸಾರ್ವಜನಿಕ ಅನುಕೂಲಕ್ಕಾಗಿ ಹನಗನಹಳ್ಳಿ ಹಾಗೂ ರಾಯಶೆಟ್ಟಿಪುರ ಗ್ರಾಮದಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಮೂರ‌್ನಾಲ್ಕು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಹಾಗೆಯೇ ಕೆರಗೋಡು ಗ್ರಾಮದಿಂದ ತಾಳೆಮೇಳೆದೊಡ್ಡಿಗೆ 50 ಲಕ್ಷ ರೂ ವೆಚ್ಚದಲ್ಲಿ ರಸ್ತೆ ನಿರ್ಮಾಣ, ಶಿವಪುರ ಕಾಲನಿಗೆ 10 ಲಕ್ಷ ರೂ ವೆಚ್ಚದಲ್ಲಿ ಎಸ್‌ಇಪಿ ಯೋಜನೆಯಡಿ ರಸ್ತೆ ಮತ್ತು ತಂಗಳಗೆರೆಯಲ್ಲಿ 25 ಲಕ್ಷ ರೂ ವೆಚ್ಚದ ರಸ್ತೆ ಕಾಮಗಾರಿ ಉದ್ಘಾಟಿಸಲಿದೆ. ಈ ಎಲ್ಲ ಕಾಮಗಾರಿಗಳು ಶೀಘ್ರವೇ ಪೂರ್ಣಗೊಳ್ಳಲಿದ್ದು, ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಮಂಡ್ಯ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಮಾಜಿ ಸದಸ್ಯ ಬಾಬು, ಗ್ರಾಮ ಪಂಚಾಯತಿ ಅಧ್ಯಕ್ಷ ನವೀನ್‌ಕುಮಾರ್, ಸದಸ್ಯ ಕೃಷ್ಣೇಗೌಡ, ಪ್ರಕಾಶ್, ಚಿಕ್ಕಬಳ್ಳಿ ಕೃಷ್ಣ, ದೇವರಾಜ್, ಶ್ರೀಕಾಂತ್ ಇತರರಿದ್ದರು.