ಉತ್ತಮ ಶಿಕ್ಷಕಿ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿರುವ ಜೋವಿಟಾ ವಾಸ್ ಅವರನ್ನು ಸಂತ ಅಂತೋಣಿ ದೇವಾಲಯದ ವತಿಯಂದ ಸನ್ಮಾನಿಸಿ ಗೌರವಿಸುತ್ತಿರುವುದು. 
ಜಿಲ್ಲೆ

ಮುಖ್ಯಶಿಕ್ಷಕಿ ಜೋವಿಟಾ ವಾಸ್‌ಗೆ ಸನ್ಮಾನ

ಮಾದೇಶ್ ತಿ.ನರಸೀಪುರ

ಸುಂಟಿಕೊಪ್ಪ: ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನರಾದ ಸುಂಟಿಕೊಪ್ಪದ ಸಂತ ಅಂತೋಣಿ ಶಾಲೆ ಮುಖ್ಯೋಪಾಧ್ಯಾಯನಿ ಜೋವಿಟಾ ವಾಸ್ ಅವರಿಗೆ ಸಂತ ಅಂತೋಣಿ ದೇವಾಲಯದ ವತಿಯಿಂದ ಸನ್ಮಾನಿಸಲಾಯಿತು.

ಸೆ.14ರಂದು ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನ ಮೃತ್ಯುಂಜಯ ಸಭಾಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಶಿಕ್ಷಕರ ಸಂಘದ ವತಿಯಿಂದ ಉತ್ತಮ ಶಿಕ್ಷಕಿ ರಾಜ್ಯಮಟ್ಟ ಪ್ರಶಸ್ತಿಗೆ ಭಾಜನರಾಗಿರುವ ಜೋವಿಟಾ ವಾಸ್ ಅವರನ್ನು ಸಂತ ಅಂತೋಣಿ ದೇವಾಲಯದ ಧರ್ಮಗುರು ರೇ.ಫಾ.ವಿಜಯಕುಮಾರ್, ಸಂತ ಕ್ಲಾರ ಕನ್ಯಾಸ್ತ್ರೀಮಠದ ಕನ್ಯಾಸ್ತ್ರೀಯರು ಗೌರವಿಸಿದರು.