ಬೆಟಗೇರಿ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ ಅಂಗವಾಗಿ ಅಳವಂಡಿ02 ಮತದಾನ ಮಾಡುತ್ತಿರುವ ವಿದ್ಯಾರ್ಥಿ. 
ಜಿಲ್ಲೆ

ಬೆಳಗಟ್ಟಿ ಶಾಲೆ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಶಕ್ತಿ ತಿಳಿಸುವ ಪ್ರಯತ್ನ

Gangavati - Mohan Kumar H R

ಅಳವಂಡಿ: ಶಾಲಾ ಮಕ್ಕಳಿಗೆ ಪ್ರಜಾಪ್ರಭುತ್ವ ಚುನಾವಣೆ ಹಾಗೂ ಮತದಾನದ ಮಹತ್ವ ತಿಳಿಸುವ ಉದ್ದೇಶದಿಂದ ಶಾಲಾ ಸಂಸತ್ ಚುನಾವಣೆ ನಡೆಸಲಾಗುತ್ತಿದೆ. ಇದರಿಂದ ಮಕ್ಕಳಿಗೆ ಪ್ರಜಾಪ್ರಭುತ್ವದ ಶಕ್ತಿಯ ಬಗ್ಗೆ ಅರಿವು ಮೂಡುತ್ತದೆ ಎಂದು ಮುಖ್ಯ ಶಿಕ್ಷಕ ಪರಶುರಾಮ ಸಾಲ್ಮನಿ ತಿಳಿಸಿದರು.

ಸಮೀಪದ ಬೆಟಗೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಾಲಾ ಸಂಸತ್ ಚುನಾವಣಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಮತದಾನ ಸರ್ವಶ್ರೇಷ್ಠ ಕೆಲಸ. ಹಕ್ಕುಚಲಾವಣೆ ಬಗ್ಗೆ ಪಾಲಕರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಸರ್ವರೂ ಮತದಾನ ಮಾಡುವುದರಿಂದ ಪ್ರಜಾಪ್ರಭುತ್ವದ ಅಡಿಪಾಯ ಗಟ್ಟಿಯಾಗಲು ಸಾಧ್ಯ ಎಂದರು.

ಚುನಾವಣಾ ಪ್ರಕ್ರಿಯೆ: ವಿದ್ಯಾರ್ಥಿಗಳಿಂದ ಒಟ್ಟು 14 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಯಿತು. ನಾಮ ಪತ್ರ ಪರಿಶೀಲನೆ, ಹಿಂಪಡೆಯುವ ಕಾರ್ಯ, ಅಭ್ಯರ್ಥಿಗಳ ಘೋಷಣೆ, ಮತದಾರರ ಪಟ್ಟಿ ಪ್ರಕಟ, ನಂತರ ವಿದ್ಯಾರ್ಥಿಗಳು ಸಾಲಾಗಿ ನಿಂತು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮತದಾನ ಮಾಡಿದರು. ಮತಗಳ ಎಣಿಕೆ ನಡೆದು ಚುನಾಯಿತ ಅಭ್ಯರ್ಥಿಗಳ ಘೋಷಣೆ ಮಾಡಲಾಯಿತು. ಮಕ್ಕಳಿಂದ ಮತದಾನದ ಜಾಗೃತಿ ಮೂಡಿಸುವ ಕಾರ್ಯ ನಡೆಯಿತು.

ಶಿಕ್ಷಕರಾದ ಸುರೇಶ ಮಾಳಿ, ನಾರಾಯಣಪ್ಪ ಬಿಸರಳ್ಳಿ, ಶಿರಸಪ್ಪ ಗಡಾದ, ತುಕಾರಾಮ, ನಿರ್ಮಲಾ ಮಾಲಿಪಾಟೀಲ, ಸುಷ್ಮಾ, ಶ್ವೇತಾ, ರಾಜಾಸಾಹೇಬ್, ಪ್ರಕಾಶರಡ್ಡಿ, ಗೋವಿಂದರಡ್ಡಿ ಚುನಾವಣಾ ಕಾರ್ಯ ನಡೆಸಿದರು.