ಜಿಲ್ಲೆ

ಇನ್ಸ್ ಪೆಕ್ಟರ್ ಹೆಸರಲ್ಲಿ ಆನ್ ಲೈನ್ ವಂಚನೆಗೆ ಒಳಗಾದ ಹೆಡ್​ ಕಾನ್ಸ್ ಸ್ಟೇಬಲ್​

ರಾಮನಗರ: ಪೊಲೀಸ್​ ಅಧಿಕಾರ ಹೆಸರಲ್ಲಿ ಪೊಲೀಸ್​ ಕಾನ್ಸ್​ಸ್ಟೇಬಲ್​ಗೆ ಸಂದೇಶ ಕಳುಹಿಸಿ 75 ಸಾವಿರ ರೂ ವಂಚನೆ ಮಾಡಿರುವ ಪ್ರಕರಣ ರಾಮನಗರ ಸಿಇಎನ್​ ಠಾಣೆಯಲ್ಲಿ ದಾಖಲಾಗಿದೆ.

ಮುಖ್ಯಪೇದೆ ಧನಂಜಯ ಹಣ ಕಳೆದುಕೊಂಡವರು. ಇವರ ಸ್ನೇಹಿತ ಕೈಲಾಶ್​ ಎನ್ನುವರ ಮೊಬೈಲ್​ಗೆ ಸೆ.26ರಂದು ಹೊಸ ನಂಬರ್​ನಿಂದ ಸಂದೇಶ ಒಂದು ಬಂದಿದ್ದು, ಇದರಲ್ಲಿ ತಾನು ಪೊಲೀಸ್​ ಇನ್ಸ್​ಪೆಕ್ಟರ್​ ಬಿ.ಎಸ್​.ಅಶೋಕ್​ ಬಿಂಬಿಸುವಂತೆ ಮೊಬೈಲ್​ಗೆ ಬಿಎಸ್​ ಎಂದು ಹೆಸರಿಟ್ಟು, ಕ್ಯೂರ್​ ಕೋಡ್​ ಒಂದನ್ನು ಕಳುಹಿಸಿದ್ದಾರೆ.

ನಂತರ ತಾನು ಕಳುಹಿಸಿರುವ ಮೊಬೈಲ್​ ಸಂಖ್ಯೆಗೆ ಕೂಡಲೇ 75 ಸಾವಿರ ರೂ.ಗಳನ್ನು ಕಳುಹಿಸುವಂತೆ ಸೂಚಿಸಿದ್ದಾರೆ. ಇದನ್ನು ನಂಬಿದ ಕೈಲಾಶ್​ ನನಗೆ ಬಂದು ತುರ್ತಾಗಿ ಹಣ ಕಳುಹಿಸಬೇಕಿದೆ ಎಂದು ಹೇಳಿದ್ದರಿಂದ ಸೆ.26ರಂದೇ ಧನಂಜಯ ತಮ್ಮ ಎರಡು ಬ್ಯಾಂಕ್​ ಖಾತೆಗಳಿಂದ ಒಮ್ಮೆ 50 ಸಾವಿರ ಮತ್ತು 10 ಸಾವಿರ ರೂ.ಗಳನ್ನು ಕಳುಹಿಸಿದ್ದಾರೆ. ನಂತರ ಇವರ ಜೊತೆಯಲ್ಲಿ ಕೆಲಸ ಮಾಡುವ ಕಲ್ಯಾಣ್​ ಕುಮಾರ್​ ಎಂಬುವರ ಖಾತೆಯಿಂದಲೂ 15 ಸಾವಿರ ರೂ.ಗಳನ್ನು ಒಟ್ಟು 75 ಸಾವಿರ ರೂ.ಗಳನ್ನು ಇನ್ಸ್​ಪೆಕ್ಟರ್​ ಅಶೋಕ್​ ಎಂದುಕೊಂಡು ಕಳುಹಿಸಿದ್ದಾರೆ.

ಆದರೆ, ನಂತರ ತಾನು ಮೋಸ ಹೋಗಿರುವುದು ಗೊತ್ತಾದ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿ ಹೆಸರಲ್ಲಿ ಸಂದೇಶ ಕಳುಹಿಸಿ ತುರ್ತಾಗಿ ಹಣ ಬೇಕು ಎಂದು ವಂಚಿಸಿರುವ ಆರೋಪಿಗಳನ್ನು ಪತ್ತೆ ಮಾಡಿ ಹಣ ವಸೂಲಿ ಮಾಡಿಕೊಡುವಂತೆ ಧನಂಜಯ ಸೋಮವಾರ ಸಿಇಎಸ್​ ಠಾಣೆಗೆ ದೂರು ನೀಡಿದ್ದಾರೆ.