ಹುಬ್ಬಳ್ಳಿ: ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಎಸ್‌ಡಿಎಂಸಿ ಸದಸ್ಯ ಅನ್ವರ ಮುಜಾಹಿದ್ ವಿರುದ್ಧ ಇಲ್ಲಿನ ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪಾಠ ಮಾಡುವ ನೆಪದಲ್ಲಿ ನಗರದ ಉರ್ದು ಶಾಲೆಯೊಂದರ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ. ಇದನ್ನು ವಿದ್ಯಾರ್ಥಿನಿ ಪಾಲಕರಿಗೆ ತಿಳಿಸಿದ್ದಳು. ಠಾಣೆಗೆ ತೆರಳಿದ ವಿದ್ಯಾರ್ಥಿನಿ, ಪಾಲಕರು ದೂರು ನೀಡಿದ್ದರು. ಅನ್ವರ ವಿರುದ್ಧ ಫೊಕ್ಸೋ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.