ಶಿವಮೊಗ್ಗ ವಿನೋಬನಗರ ಠಾಣೆ 
ಜಿಲ್ಲೆ

ನಗದು, ಎಟಿಎಂ ಕಾರ್ಡ್ ಇದ್ದ ಬ್ಯಾಗ್ ಕಿತ್ತು ಪರಾರಿ

ಶಿವಮೊಗ್ಗ: ಎಲ್‌ಬಿಎಸ್‌ನಗರದ ತಪೋಮಯದ ಬಳಿ ಪಾದಚಾರಿ ಮಹಿಳೆಯನ್ನು ಅಡ್ಡಗಟ್ಟಿದ ಬೈಕ್ ಸವಾರ 10 ಸಾವಿರ ರೂ. ನಗದು, ಎಟಿಎಂ ಕಾರ್ಡ್ ಮತ್ತು ಮೊಬೈಲ್ ಇದ್ದ ವ್ಯಾನಿಟು ಬ್ಯಾಗ್ ಕಸಿದು ಪರಾರಿಯಾಗಿದ್ದಾನೆ.

ಎಲ್‌ಬಿಎಸ್‌ನಗರದ ರೇಣುಕಾ ಅವರನ್ನು ಬೆದರಿಸಿ ಹಣ, ಮೊಬೈಲ್ ಇದ್ದ ವ್ಯಾನಿಟಿ ಬ್ಯಾಗ್ ಕಳೆದುಕೊಂಡವರು. ರೇಣುಕಾ ಅವರ ಪುತ್ರ ಗಾಂಧಿನಗರದಲ್ಲಿ ಪೂಜಾ ಸಾಮಾಗ್ರಿಗಳ ಅಂಗಡಿ ನಡೆಸುತ್ತಿದ್ದು ಶುಕ್ರವಾರ ಅಂಗಡಿಗೆ ತೆರಳಿ ರಾತ್ರಿ ಆಟೋದಲ್ಲಿ ಎಲ್ಬಿಎಸ್ ನಗರಕ್ಕೆ ಬಂದಿದ್ದರು.
ಈ ವೇಳೆ ಬೈಕ್‌ನಲ್ಲಿ ಬಂದ ದುಷ್ಕರ್ಮಿ ಬೆದರಿಸಿ ವ್ಯಾನಿಟಿ ಬ್ಯಾಗ್ ಕಿತ್ತುಕೊಂಡಿದ್ದಾನೆ. ಈ ಬಗ್ಗೆ ರೇಣುಕಾ ಅವರು ವಿನೋಬನಗರ ಠಾಣೆಗೆ ದೂರು ನೀಡಿದ್ದಾರೆ.