ತರೀಕೆರೆಯಲ್ಲಿ ಏರ್ಪಡಿಸಿದ್ದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಂ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಎಸಿ ಡಾ.ಕೆ.ಜೆ.ಕಾಂತರಾಜ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ವಿ.ಎಸ್.ರಾಜೀವ್, ಎಚ್.ಪ್ರಶಾಂತ್, ಎಸ್.ಮಂಜುನಾಥ್ ಇತರರಿದ್ದರು. 
ಜಿಲ್ಲೆ

ಮಹಾನೀಯರ ಆದರ್ಶ ಅನುಕರಣೀಯ

ತರೀಕೆರೆ: ದೇಶದ ಪ್ರಗತಿಗಾಗಿ ಶ್ರಮಿಸಿದ ಮಹಾನೀಯರ ಸ್ಮರಣೆ ಜತೆ ಅವರ ಆದರ್ಶ ಪಾಲನೆ ಎಂದೆಂದಿಗೂ ಅನುಕರಣೀಯವಾಗಬೇಕು ಎಂದು ಎಸಿ ಡಾ.ಕೆ.ಜೆ.ಕಾಂತರಾಜ್ ಹೇಳಿದರು.
ಶುಕ್ರವಾರ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಂ ಅವರ 117ನೇ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಬಾಬು ಜಗಜೀವನ ರಾಂ ಅವರ ವಿಕಾಸ ಮುಖಿ ಆರ್ಥಿಕ ಚಿಂತನೆಗಳು, ದೇಶದ ಸಮಗ್ರತೆಗೆ ಕೈಗೊಂಡ ನಿರ್ಧಾರಗಳು ಇಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು ಎಂದರು.
ತಹಸೀಲ್ದಾರ್ ವಿ.ಎಸ್.ರಾಜೀವ್, ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಸ್.ಮಂಜುನಾಥ್ ಮತ್ತಿತರರಿದ್ದರು.