ಮುಳಗುಂದ : ಜಗತ್ತಿನಲ್ಲಿ ಜನ್ಮ ನೀಡಿದ ತಂದೆ-ತಾಯಿ ಶ್ರೇಷ್ಠರು. ತಾಯಿ ತ್ಯಾಗಮಯಿ, ಜನ್ಮದಾತೆ ಅವ್ವನಿಗೆ ಸಮನಾದವರು ಮತ್ತೊಬ್ಬರಿಲ್ಲ. ಎಂದು ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು ಹೇಳಿದರು.
ಮಹಾಂತ ಶಿವಯೋಗಿ ಗವಿಮಠದಲ್ಲಿ ಇತ್ತೀಚೆಗೆ ಅವ್ವ ಸೇವಾ ಪ್ರತಿಷ್ಠಾನ ಉದ್ಘಾಟನೆ ಹಾಗೂ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ತಂದೆ-ತಾಯಿ ಸೇವೆ ಜೀವನವಿಡಿ ಮಾಡಿದರೂ ಅವರ ಋಣ ತೀರಿಸಲಾಗದು. ಶಿಕ್ಷಕ ವೃತ್ತಿ ಜತೆಗೆ ಸಮಾಜ ಸೇವೆಯ ಪ್ರವೃತ್ತಿ ಬೆಳೆಸಿಕೊಂಡಿರುವ ಶಿಕ್ಷಕ ಮಂಜುನಾಥ ಮಟ್ಟಿ ಅವರು ತಾಯಿ ಸಾವಂತ್ರವ್ವ ಸ್ಮರಣಾರ್ಥ ಅವ್ವ ಸೇವಾ ಪ್ರತಿಷ್ಠಾನ ಹುಟ್ಟುಹಾಕಿದ್ದು ಶ್ಲಾಘನೀಯ ಎಂದರು.
ಸಾಧಕರನ್ನು ಸನ್ಮಾನಿಸಲಾಯಿತು. ಗೌರಮ್ಮ ಬಡ್ನಿ ಉದ್ಘಾಟಿಸಿದರು. ಬಸವಂತಪ್ಪ ಮಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪಟ್ಟಣ ಪಂಚಾಯ್ತಿ ಸದಸ್ಯ ಎಸ್.ಸಿ. ಬಡ್ನಿ, ವೈದ್ಯ ಎಸ್.ಸಿ. ಚವಡಿ, ಸಾಹಿತಿ ಬಿ.ಎಂ. ಹರಪನಹಳ್ಳಿ,ಪಿ.ಎ. ವಂಟಕರ, ಉದಯ ರಾಯರೆಡ್ಡಿ, ಮಹಾದೇವಪ್ಪ ಬಟ್ಟೂರ, ಸೋಮಶೇಖರಗೌಡ ಪಾಟೀಲ, ತಿಮ್ಮಣ್ಣ ಚವಡಿ, ಚಂದ್ರಶೇಖರಯ್ಯ ಹಿರೇಮಠ, ಪರಪ್ಪ ಕರಿಗಾರ ಇತರರಿದ್ದರು. ದಿನಪತ್ರಿಕೆ ವಿತರಕರಿಗೆ ಸೇವಾ ಪ್ರತಿಷ್ಠಾನದ ವತಿಯಿಂದ ಜರ್ಕಿನ್ ವಿತರಿಸಲಾಯಿತು.