ಸರಗೂರು ತಾಲೂಕಿನ ಕಂದೇಗಾಲ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಅಂಗವಾಗಿ ವಿಶ್ವ ಜ್ಞಾನಿ ಜ್ಞಾನಮಂದಿರ ಗ್ರಂಥಾಲಯವನ್ನು ಗಣ್ಯರು ಉದ್ಘಾಟಿಸಿದರು. ಗೋವಿಂದರಾಜು, ಶಿವರಾಜು, ಅಣ್ಣಯ್ಯಸ್ವಾಮಿ, ಮಣಿಕಂಠ ನಾಗೇಂದ್ರ ಇದ್ದರು. 
ಜಿಲ್ಲೆ

ಅನ್ಯಾಯ, ಜಾತಿ ತಾರತಮ್ಯದ ವಿರುದ್ಧ ಹೋರಾಡಿದ್ದರು

ಸರಗೂರು: ಡಾ.ಅಂಬೇಡ್ಕರ್ ಅವರು ಶಿಕ್ಷಣ ಬಹಳ ಮುಖ್ಯ ಎಂದು ನಂಬಿದ್ದರು. ಅದಕ್ಕಾಗಿ ಅವರು ವಿದೇಶಗಳಲ್ಲಿ ಓದಿ ಪದವಿಗಳನ್ನು ಪಡೆದರು. ಅನ್ಯಾಯ ಮತ್ತು ಜಾತಿ ತಾರತಮ್ಯದ ವಿರುದ್ಧ ಹೋರಾಡಿದರು ಎಂದು ದಸಂಸ (ಅಂಬೇಡ್ಕರ್ ವಾದ) ತಾಲೂಕು ಸಂಚಾಲಕ ಕೂಡಗಿ ಗೋವಿಂದರಾಜು ತಿಳಿಸಿದರು.

ತಾಲೂಕಿನ ಸಾಗರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂದೇಗಾಲ ಗ್ರಾಮದಲ್ಲಿ ಭಾನುವಾರ ಅಂಬೇಡ್ಕರ್ ಅವರ 133ನೇ ಜಯಂತಿ ಅಂಗವಾಗಿ ದಸಂಸ ಅಂಬೇಡ್ಕರ್ ವಾದ ಸಂಘಟನೆ ಸಹಕಾರದೊಂದಿಗೆ ವಿಶ್ವ ಜ್ಞಾನಿ ಜ್ಞಾನ ಮಂದಿರ ಗ್ರಂಥಾಲಯವನ್ನು ಉದ್ಘಾಟನೆ ಮಾಡಿ ಹಾಗೂ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಅಂಬೇಡ್ಕರ್ ಅವರು ಅರ್ಥಶಾಸ್ತ್ರಜ್ಞ, ರಾಜಕಾರಣಿ ಮತ್ತು ಸಮಾಜ ಸುಧಾರಕರಾಗಿದ್ದರು. ಅವರು ಹಿಂದಿನ ದಿನಗಳಲ್ಲಿ ಅಸ್ಪೃಶ್ಯರೆಂದು ಪರಿಗಣಿಸಿದ್ದ ದಲಿತ ಸಮುದಾಯದ ಹಕ್ಕುಗಳಿಗಾಗಿ ಹೋರಾಡಿದರು ಎಂದು ತಿಳಿಸಿದರು.

ಯೂತ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜು ಮಾತನಾಡಿ, ಭಾರತದ ಸಂವಿಧಾನದ ಪ್ರಮುಖ ವಾಸ್ತುಶಿಲ್ಪಿ, ಅಂಬೇಡ್ಕರ್ ಅವರು ಮಹಿಳೆಯರ ಹಕ್ಕುಗಳು ಮತ್ತು ಕಾರ್ಮಿಕರ ಹಕ್ಕುಗಳಿಗಾಗಿ ಪ್ರತಿಪಾದಿಸಿದ್ದರು ಎಂದರು.

ಗ್ರಾಮದ ಯಜಮಾನರಾದ ರುದ್ರಯ್ಯ, ಬಸವಯ್ಯ, ಮರಿದಾಸಯ್ಯ, ವಿಶ್ವಕರ್ಮ ಸಮಾಜದ ಯಜಮಾನರಾದ ನಾಗಚಾರಿ,ಬೆಳಗಿರಯ್ಯ, ದೊಡ್ಡಯ್ಯ, ಮುಖ್ಯಶಿಕ್ಷಕ ನಾಗರಾಜು, ದಸಂಸ (ಅಂಬೇಡ್ಕರ್ ವಾದ) ಸಂಘಟನೆ ಕಾರ್ಯಕರ್ತರಾದ ಚಂದ್ರ, ಅಣ್ಣಯ್ಯ ಸ್ವಾಮಿ, ನಾಗೇಂದ್ರ ಮೊಳೆಯೂರು ಕಾವಲ್, ಮಣಿಕಂಠ, ಕುಮಾರ್, ಕೆಂಪರಾಜು, ಶಿವಲಿಂಗ ಕೂಡಗಿ ಹಾಜರಿದ್ದರು.