ಜಿಲ್ಲೆ

ರೈತರಿಗಾಗಿ ಹೋರಾಟ ಮಾಡಿರುವ ದೇವೇಗೌಡರು: ಮನ್‌ಮುಲ್ ನಿರ್ದೇಶಕ ಬಿ.ಆರ್.ರಾಮಚಂದ್ರು ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ದೇಶ ಕಂಡ ಅಪ್ರತಿಮ ನಾಯಕ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ಅವರು ರೈತರ ಬಗ್ಗೆ ಕಾಳಜಿ ಹೊಂದಿದ್ದಾರೆ. ಅನ್ನದಾತರ ಸಮಸ್ಯೆ ಬಗೆಹರಿಸಲು ದನಿ ಎತ್ತಿ ಹೋರಾಟ ಮಾಡಿದ್ದಾರೆ ಎಂದು ಮನ್‌ಮುಲ್ ನಿರ್ದೇಶಕ ಬಿ.ಆರ್.ರಾಮಚಂದ್ರು ಹೇಳಿದರು.

ಎಚ್.ಡಿ.ದೇವೇಗೌಡರ ಜನ್ಮದಿನದ ಅಂಗವಾಗಿ ನಗರದ ವಿದ್ಯಾಗಣಪತಿ ದೇವಾಲಯದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ವಿಶೇಷ ಪೂಜೆಯಲ್ಲಿ ಪಾಲ್ಗೊಗೊಂಡು ಅವರು ಮಾತನಾಡಿದರು.ದೇವೇಗೌಡರಿಗೆ ರೈತರ ಬಗ್ಗೆ ಹೋರಾಟ ಮಾಡುವ ಶಕ್ತಿಯನ್ನು ದೇವರು ಕೊಡಲಿ. ಅವರ ಸೇವೆ ಇನ್ನು ಅಗತ್ಯವಿದೆ. ಎಚ್ಡಿಡಿಗೆ ಆಯಸ್ಸು, ಆರೋಗ್ಯವನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ನಗರಸಭೆ ಅಧ್ಯಕ್ಷ ಎಂ.ವಿ.ನಾಗೇಶ್ ಮಾತನಾಡಿದರು. ನಗರಸಭೆ ಮಾಜಿ ಅಧ್ಯಕ್ಷೆ ಕೆ.ಸಿ.ನಾಗಮ್ಮ, ಸದಸ್ಯರಾದ ರವಿ ಕಲ್ಲಹಳ್ಳಿ, ಶಿವಲಿಂಗು, ರಾಮಲಿಂಗಯ್ಯ, ಮುಖಂಡರಾದ ನವೀನ್, ಬೋರೇಗೌಡ, ಗೀತಾ ಸುರೇಶ್, ಪುಟ್ಟಸ್ವಾಮಿ, ಬಿ.ಆರ್.ಸುರೇಶ್, ಪಾಪಣ್ಣ, ಈರಣ್ಣ, ಹನಕೆರೆ ನಾಗಪ್ಪ, ವಿಜಯಲಕ್ಷ್ಮೀ, ಪ್ರಶಾಂತ್, ನವೀನ್ ತಂಡಸನಹಳ್ಳಿ, ಚಂದಗಾಲು ಲೋಕೇಶ್ ಇತರರಿದ್ದರು.