ಜಿಲ್ಲೆ

ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಿದ ಮೃಣಾಲ ಹೆಬ್ಬಾಳಕರ್

ಮಂಜುನಾಥ ಕೋಳಿಗುಡ್ಡ

ಖಾನಾಪುರ: ಖಾನಾಪುರ ತಾಲೂಕಿನ ಬಿಳಕಿ -ಅವರೊಳ್ಳಿಯ ಶ್ರೀ ರುದ್ರಸ್ವಾಮಿಗಳ ಮಠದಲ್ಲಿ ನಡೆದ ಶ್ರೀ ರುದ್ರಸ್ವಾಮಿ ಶಿಲಾ ಮಠದ ಶಂಕುಸ್ಥಾಪನಾ ಸಮಾರಂಭದಲ್ಲಿ ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಭಾಗವಹಿಸಿದ್ದರು.

ಸಮಾರಂಭದಲ್ಲಿ ಶ್ರೀ ಚನ್ನಬಸವ ದೇವರು, ನಿಷ್ಕಲ ಮಂಟಪ ಬೈಲೂರಿನ ಪರಮಪೂಜ್ಯ ಶ್ರೀ ನಿಜಗುಣಾನಂದ ಮಹಾಸ್ವಾಮಿಗಳು, ಕಿತ್ತೂರಿನ ರಾಜಗುರು ಕಲ್ಮಠದ ಶ್ರೀ ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿಗಳು, ಅರಳಿಕಟ್ಟಿ ತೋಂಟದಾರ್ಯ ವಿರಕ್ತಮಠದ ಶಿವಮೂರ್ತೆಶ್ವರ ಮಹಾಸ್ವಾಮಿಗಳು, ನಂದಗಡ ಚನ್ನವೀರ ಮಠದ ಪರಮಪೂಜ್ಯ ಚನ್ನವೀರೇಶ್ವರ ದೇವರು, ವಿಧಾನಸಭೆಯ ಉಪ ಸಭಾಧ್ಯಕ್ಷರಾದ ರುದ್ರಪ್ಪ ಲಮಾಣಿ, ಶಾಸಕರಾದ ವಿಠ್ಠಲ ಹಲಗೇಕರ್, ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ರೋಹಿಣಿ ಪಾಟೀಲ, ಮಹಾಂತೇಶ ಕವಟಗಿಮಠ್, ಮಠದ ಪದಾಧಿಕಾರಿಗಳು, ಭಕ್ತರು ಉಪಸ್ಥಿತರಿದ್ದರು.