ಕೆರೂರ ಪಟ್ಟಣದ ಕಿಲ್ಲಾ ಪೇಟೆಯಲ್ಲಿರುವ ಹಜರತ್ ಸಲಾಬತಖಾನ್ ದರ್ಗಾದಲ್ಲಿ ಸೋಮವಾರ ಉರುಸು ಸಂಭ್ರಮದಿಂದ ಜರುಗಿತು. 
ಜಿಲ್ಲೆ

ಸಂಭ್ರಮದಿಂದ ಜರುಗಿದ ಹಜರತ್ ಸಲಾಬತಖಾನ್ ಉರುಸ್

ಕೆರೂರ: ಸ್ಥಳೀಯ ಕಿಲ್ಲಾ ಪೇಟೆಯಲ್ಲಿರುವ ಹಜರತ್ ಸಲಾಬತಖಾನ್ ಉರುಸು ಸೋಮವಾರ ಸಂಜೆ ಸಂಭ್ರಮದಿಂದ ಜರುಗಿತು.

ಸಂಜೆ ಹಜರತ್ ಸಲಾಬತಖಾನ್ ದರ್ಗಾದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಉರುಸು ಅಂಗವಾಗಿ ದರ್ಗಾದಲ್ಲಿ ವಿವಿಧ ಬಗೆಯ ಹೂ ಹಾಗೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.

ಸ್ಥಳೀಯ ಮುಲ್ಲಾ ಸಮಾಜದ ಉಸ್ಮಾನಸಾಬ ಮುಲ್ಲಾ ಹಾಗೂ ನಾಸೀರಸಾಬ ಮುಲ್ಲಾ ಕುರಾನ್ ಪಠಣ ಮಾಡುವುದರ ಮೂಲಕ ಉರುಸಿಗೆ ಚಾಲನೆ ನೀಡಿದರು.

ಉರುಸು ಅಂಗವಾಗಿ ಹಿಂದು ಮತ್ತು ಮುಸ್ಲಿಂ ಬಾಂಧವರು ಏಕತೆಯಿಂದ ದರ್ಗಾದಲ್ಲಿ ಸಕ್ಕರೆ ಹಂಚಿ ಸಂಭ್ರಮಿಸಿದರು. ದರ್ಗಾದ ಆವರಣದಲ್ಲಿ ಉರುಸಿಗೆ ಆಗಮಿಸಿದ ನೂರಾರು ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಾ.ಎಂ. ಜಿ. ಕಿತ್ತಲಿ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಮೋದಿನಸಾಬ ಚಿಕ್ಕೂರ, ಪಟ್ಟಣ ಪಂಚಾಯಿತಿ ನಾಮನಿರ್ದೇಶಿತ ಸದಸ್ಯ ಶ್ರೀಧರ ಕಾಂಬಳೆ, ಯಮನೂರ ವಡ್ಡರ, ಹಾಸಿಮ್ ಮುಲ್ಲಾ, ಬುಡ್ಡೆಸಾಬ ಮುಲ್ಲಾ, ರ್ಇಾನ್ ಮುಲ್ಲಾ, ನೌಜವಾನ ಶಿರತ ಕಮಿಟಿ ಅಧ್ಯಕ್ಷ ಮೋದಿನಸಾಬ ದೊಡಕಟ್ಟಿ, ಸದ್ದಾಮ ಹುಲ್ಲಿಕೇರಿ ಮತ್ತಿತರರು ಇದ್ದರು.