ಜಿಲ್ಲೆ

ವಿ.ಬಿ.ಕುಳಮರ್ವಗೆ ಹವ್ಯಕ ಸಾಧಕರತ್ನ ಪ್ರಶಸ್ತಿ

ಕುಂಬಳೆ: ಬೆಂಗಳೂರಿನಲ್ಲಿ ನಡೆಯಲಿರುವ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಕಾಸರಗೋಡಿನ ಹಿರಿಯ ಸಾಹಿತಿ, ಶಿಕ್ಷಣತಜ್ಞ, ವಿ.ಬಿ.ಕುಳಮರ್ವ ಅವರ ಬಹುಮುಖ ಸಾಧನೆಗಾಗಿ ಹವ್ಯಕ ಸಾಧಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಹವಿ-ಸವಿ ಕೋಶ ಎಂಬ ಪ್ರಪ್ರಥಮ ಹವ್ಯಕ-ಕನ್ನಡ ನಿಘಂಟನ್ನು ರಚಿಸಿದ ಇವರು ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನದ ಪ್ರಧಾನ ಗೋಷ್ಠಿಯೊಂದರ ಅಧ್ಯಕ್ಷ ಸ್ಥಾನದ ಗೌರವಕ್ಕೂ ಪಾತ್ರರಾಗಿದ್ದರು.