Crime 
ಹಾವೇರಿ

ತುಂಗಭದ್ರಾ ನದಿಯಲ್ಲಿ ಮುಳಗಿ ಯುವಕ ಸಾವು

ಕರಿಯಪ್ಪ ಅರಳಿಕಟ್ಟಿ

ರಾಣೆಬೆನ್ನೂರ: ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಲು ಹೋದ ಯುವಕನೊಬ್ಬ ನೀರಿನಲ್ಲಿ ಮುಳಗಿ ಮೃತಪಟ್ಟ ಘಟನೆ ತಾಲೂಕಿನ ಚೌಡಯ್ಯದಾನಪುರ ಗ್ರಾಮದ ಬಳಿ ನಡೆದಿದೆ.

ತಾಲೂಕಿನ ಹಳೆಹೊನ್ನತ್ತಿ ಗ್ರಾಮದ ಹರೀಶ ಮಂಜುನಾಥ ನಿಟ್ಟೂರ (20) ಮೃತ ವ್ಯಕ್ತಿ.

ಈತ ಸ್ನೇಹಿತರೊಂದಿಗೆ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ. ಈ ಸಮಯದಲ್ಲಿ ನೀರಿನಲ್ಲಿ ಮುಳಗಿ ಮೃತಪಟ್ಟಿದ್ದಾನೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.