Crime 
ಹಾವೇರಿ

ಪ್ರೀತಿಸಿದ ಯುವತಿ ವಿಷ ಸೇವಿಸಿದ್ದಾಳೆಂದು ಯುವಕ ಹಿಂಗ್ ಮಾಡ್ಕೋಳೋದಾ

ಕರಿಯಪ್ಪ ಅರಳಿಕಟ್ಟಿ

ಹಿರೇಕೆರೂರ: ಪ್ರೀತಿಸಿದ ಯುವತಿ ವಿಷ ಸೇವಿಸಿದಳೆಂದು ಮನನೊಂದು ಯುವಕ ಕೂಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮದಗ ಕೆರೆಯ ಪಾರ್ಕ್ ಬಳಿ ನಡೆದಿದೆ.

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಸಂಕ್ಲಾಪುರ ಗ್ರಾಮದ ಚಂದ್ರಶೇಖರ ಲೋಕೇಶಪ್ಪ ಯತ್ತಿನಹಳ್ಳಿ (32) ಮೃತ ವ್ಯಕ್ತಿ.

ಈತ ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದ. ಆಕೆ ಪ್ರೀತಿಯ ವಿಷಯ ಮನೆಯಲ್ಲಿ ತಿಳಿದರೆ ಸಮಸ್ಯೆ ಆಗುತ್ತದೆ ಎಂದು ವಿಷ ಸೇವಿಸಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಇದರಿಂದ ಮನನೊಂದ ಚಂದ್ರಶೇಖರ ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಹಿರೇಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.