ರಾಣೆಬೆನ್ನೂರ: ಸಿಡಿಲು ಬಡಿದ ತೆಂಗಿನಮರದ ಬಳಿ ನಿಂತಿದ್ದ ಯುವಕನೊಬ್ಬ ಎದೆನೋವಿನಿಂದ ಮೃತಪಟ್ಟ ಘಟನೆ ತಾಲೂಕಿನ ಸುಣ್ಣಕಲ್ಲಬಿದರಿ ಗ್ರಾಮದಲ್ಲಿ ನಡೆದಿದೆ.
ಗಿರೀಶ ಕರಿಯಾಲ್ಲಪ್ಪ ನೋಟದ (೨೦) ಮೃತ ಯುವಕ.
ಈತ ಮಳೆ ಬರುವ ಸಮಯದಲ್ಲಿ ತಮ್ಮಜಮೀನಿನ ತೆಂಗಿನಮರದ ಬಳಿ ನಿಂತಿದ್ದ. ಈ ಸಮಯದಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದಿದೆ. ಸಿಡಿಲಿನ ರಭಸಕ್ಕೆ ಗಿರೀಶ ಎದೆನೋವು ಬಂದು ಮೃತಪಟ್ಟಿದ್ದಾನೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.