Crime 
ಹಾವೇರಿ

ತವರು ಮನೆಗೆ ಹೋಗುವೆ ಎಂದ ಪತ್ನಿ; ನೇಣು ಬಿಗಿದುಕೊಂಡ ಪತಿ

ಸವಣೂರ: ಸರಾಯಿ ಕುಡಿಯುವುದನ್ನು ಬಿಡದಿದ್ದರೆ ನಾನು ತವರು ಮನೆಗೆ ಹೋಗುತ್ತೇನೆಂದು ಪತ್ನಿ ಹೇಳಿದ್ದಕ್ಕೆ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕಾರಡಗಿ ಗ್ರಾಮದಲ್ಲಿ ನಡೆದಿದೆ.

ಸದ್ದಾಂಹುಸೇನ ಗೌಸಮೋದಿನ ಮುಲ್ಲಾ (35) ಮೃತ ವ್ಯಕ್ತಿ.

ಈತನಿಗೆ ಪತ್ನಿ ನೀನು ಕುಡಿಯುವುದನ್ನು ಬಿಡದಿದ್ದರೆ ನಾನು ತವರು ಮನೆಗೆ ಹೋಗುವೆ ಎಂದು ಹೆದರಿಸಿದ್ದಾಳೆ. ಇದರಿಂದ ಮದ್ಯ ಸೇವಿಸಿದ ಅಮಲಿನಲ್ಲಿದ್ದ ಪತಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಹುಲಗೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.