Crime 
ಹಾವೇರಿ

ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಬೈಕ್ ಡಿಕ್ಕಿಯಾಗಿ ದುರ್ಮರಣ

ಕರಿಯಪ್ಪ ಅರಳಿಕಟ್ಟಿ

ಹಾನಗಲ್ಲ: ಜಮೀನಿನ ಕೆಲಸಕ್ಕಾಗಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬನಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲಿಯೆ ಮೃತಪಟ್ಟ ಘಟನೆ ತಾಲೂಕಿನ ಖ್ಯಾತನಾಳ ಗ್ರಾಮದಲ್ಲಿ ನಡೆದಿದೆ.

ಚಂದ್ರಕುಮಾರ ರಾಮಚಂದ್ರಪ್ಪ ಕಾನಮನಿ (33) ವ್ಯಕ್ತಿ.

ಈತ ಮನೆಯಿಂದ ನಡೆದುಕೊಂಡು ಜಮೀನಿಗೆ ಹೊರಟಿದ್ದ ಸಮಯದಲ್ಲಿ ಬೈಕ್ವೊಂದು ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಚಂದ್ರಕುಮಾರ ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.