ಗುತ್ತಲ ಸಮೀಪದ ನೀರಲಗಿ ಗ್ರಾಮದಲ್ಲಿ ಪ್ರಾಥಮಿಕ ಶಾಲೆ ಎದುರು ಗ್ರಾಮಸ್ಥರು ಧರಣಿ (protest)ಸತ್ಯಾಗ್ರಹ ಕೈಗೊಂಡರು.
ಗುತ್ತಲ: ಶಿಥಿಲಗೊಂಡ ಕೊಠಡಿ ನೆಲಸಮಗೊಳಿಸಿ, ಹೊಸ ಕೊಠಡಿಗಳ ನಿರ್ಮಾಣಕ್ಕೆ ಒತ್ತಾಯಿಸಿ ಸಮೀಪದ ನೀರಲಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗ್ರಾಮಸ್ಥರು ಮಂಗಳವಾರ ಧರಣಿ (protest) ಸತ್ಯಾಗ್ರಹ ಕೈಗೊಂಡರು.
4 ವರ್ಷಗಳ ಹಿಂದೆಯೇ ಗ್ರಾಮದ ಪ್ರಾಥಮಿಕ ಶಾಲೆಯ 3 ಕೊಠಡಿಗಳು ಶಿಥಿಲಗೊಂಡಿವೆ. ಒಂದೇ ಕೊಠಡಿಯಲ್ಲಿ 2-3 ತರಗತಿ ವಿದ್ಯಾಥಿರ್ಗಳನ್ನು ಕೂಡ್ರಿಸಿ ಪಾಠ ಮಾಡಲಾಗುತ್ತಿದೆ. ಇದರಿಂದಾಗಿ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಿದೆ. ಹೊಸ ಕೊಠಡಿಗಳನ್ನು ನಿಮಿರ್ಸುವಂತೆ 4 ವರ್ಷಗಳಿಂದ ಮನವಿ ಮಾಡುತ್ತಿದ್ದರೂ ಸ್ಪಂದಿಸಿಲ್ಲ. ನೂತನ ಕೊಠಡಿಗಳ ನಿರ್ಮಾಣಕ್ಕೆ ಸರ್ಕಾರದಿಂದ ಆದೇಶ ಬರುವವರೆಗೂ ಹೋರಾಟ ಬಿಡುವುದಿಲ್ಲ ಎಂದು ಗ್ರಾಮಸ್ಥರು ಧರಣಿ ಸತ್ಯಾಗ್ರಹ ಆರಂಭಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಡಿಡಿಪಿಐ ಮೋಹನ ದಂಡಿನ, ಬಿಇಒ ಶ್ರೀನಿವಾಸ ಬಿ., ದೈಹಿಕ ಶಿಣ ಪರಿವೀಕ ವಿನಾಯಕ ಗಡ್ಡದ, ಪಿಎಸ್ಐ ಪರಶುರಾಮ ಲಮಾಣಿ, ಸಿಆರ್ಪಿ ಮೈತ್ರಾ ಪುಟ್ಟಣ್ಣನವರ ಪ್ರತಿಭಟನಾ ನಿರತರೊಂದಿಗೆ ಚಚಿರ್ಸಿದರು.
ನಂತರ ಗ್ರಾಮದಲ್ಲಿನ ಒಂದೆರಡು ಕಡೆಗಳಲ್ಲಿ ಮಕ್ಕಳಿಗೆ ತಾತ್ಕಾಲಿಕವಾಗಿ ಪಾಠ ಮಾಡಲು ಕಟ್ಟಡಗಳನ್ನು ಪರಿಶೀಲಿಸಿದರು. ಆದರೆ, ಎಲ್ಲಿಯೂ ಸರಿಯಾದ ಕಟ್ಟಡ ದೊರೆಯಲಿಲ್ಲ. ಮಕ್ಕಳಿಗೆ ಶಿಕ್ಷಣಕ್ಕೆ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆ ಮಾಡುತ್ತೇವೆ ಎಂದು ಮನವೊಲಿಸಲು ಡಿಡಿಪಿಐ, ಬಿಇಒ ಅವರು ಎಷ್ಟೇ ಪ್ರಯತ್ನಿಸಿದರೂ, ಪ್ರತಿಭಟನಾನಿರತರು ನೂತನ ಕೊಠಡಿಗಳ ನಿರ್ಮಾಣಕ್ಕೆ ಆದೇಶದ ಪತ್ರ ಬರುವವರೆಗೆ ಹೋರಾಟ ಹಿಂದಕ್ಕೆ ಪಡೆಯಲ್ಲ. ನಮ್ಮ ಹೋರಾಟಕ್ಕೆ ಶಾಲಾ ಮಕ್ಕಳು ಬುಧವಾರದಿಂದ ಸಾಥ್ ಕೊಡುವರು ಎಂದು ತಿಳಿಸಿದರು.
ಗ್ರಾಮಸ್ಥರು ಪಟ್ಟು ಸಡಿಲಿಸದ ಕಾರಣ ಡಿಡಿಪಿಐ ಮೋಹನ ದಂಡಿನ ಅವರು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿದರು. ಜಿಪಂ ಸಿಇಒ ಅವರು ನೂತನ ಕೊಠಡಿ ನಿರ್ಮಾಣದ ಬಗ್ಗೆ ಸರ್ಕಾರಕ್ಕೆ ಮಾಹಿತಿ ಸಲ್ಲಿಸಿ, ಆದಷ್ಟು ಶ್ರೀದಲ್ಲೇ ಕೊಠಡಿಗಳ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರೂ ಪ್ರತಿಭಟನಾನಿರತರು ಮಣಿಯಲಿಲ್ಲ. ಅಲ್ಲದೆ, ಸಂಜೆ 6ರಿಂದ ಅಹೋರಾತ್ರಿ ಭಜನೆ ಮೂಲಕ ಪ್ರತಿಭಟನೆ ಕೈಗೊಳ್ಳುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ವಿಜಯರಡ್ಡಿ ಭರಮರಡ್ಡೇರ, ಶಂಭುಲಿಂಗ ಅಣ್ಣಿಗೇರಿ, ಚನ್ನವಿರಯ್ಯ ಹಿರೇಮಠ, ವೆಂಕಟೇಶ ಶೇಷನಗೌಡ್ರ, ವಿ.ಎಂ. ಅಣ್ಣಿಗೇರಿ, ಹನುಮಂತ ಬನ್ನಿಮಟ್ಟಿ, ದಯಾನಂದ ಈರಪ್ಪನವರ, ಮಂಜುನಾಥ ನಿಂಬಣ್ಣನವರ, ಭರಮಗೌಡ ದೊಡ್ಡಗೌಡ್ರ, ರಾಮಲಿಂಗ ಅಣ್ಣಿಗೇರಿ, ಲಲಿತಾ ಅಣ್ಣಿಗೇರಿ, ಬೇಬಿ ಚನ್ನದಾಸರ, ರೇಖಾ ಅಣ್ಣಿಗೇರಿ, ಮಾಲತೇಶ ಓಲೇಕಾರ, ಪ್ರಮೋದ ಮರ್ಚರಡ್ಡಿ, ಸಿ.ಡಿ. ಬಡಲಿಂಗಣ್ಣನವರ, ಪ್ರಭುರಡಡಿ ಭರಮರಡ್ಡೇರ ಇತರರಿದ್ದರು.