Chariot Festival ರಟ್ಟಿಹಳ್ಳಿ ಪಟ್ಟಣದ ಶ್ರೀ ವೀರಭದ್ರೇಶ್ವರ ಸ್ವಾಮಿ 
ಹಾವೇರಿ

Chariot Festival ರಟ್ಟಿಹಳ್ಳಿ ವೀರಭದ್ರೇಶ್ವರ ರಥೋತ್ಸವ 29ರಂದು

ರಟ್ಟಿಹಳ್ಳಿ: ಪಟ್ಟಣದ ಐತಿಹಾಸಿಕ ಶರಭಾವತಾರಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ಗುಗ್ಗಳ ಮಹೋತ್ಸವ ಮತ್ತು ದೊಡ್ಡ ರಥೋತ್ಸವ (Chariot Festival) ಹಾಗೂ ವಿವಿಧ ಧಾರ್ವಿುಕ ಕಾರ್ಯಕ್ರಮ ಮಾ. 25ರಿಂದ 29ರವರೆಗೆ ಜರುಗಲಿವೆ.
ಮಾ. 25ರಂದು ರಾತ್ರಿ 8 ಗಂಟೆಗೆ ಕುದುರೆ ಉತ್ಸವ, 26ರಂದು ರಾತ್ರಿ 8 ಗಂಟೆಗೆ ಆನೆ ಉತ್ಸವ, 27ರಂದು ರಾತ್ರಿ 8 ಗಂಟೆಗೆ ಹೂವಿನ ತೇರು, 28ರಂದು ವೀರಭದ್ರೇಶ್ವರ ಸ್ವಾಮಿಗೆ ಎಡೆ ಕೊಡುವುದು, ಜವಳ, ಹರಕೆ, ಮುಡುಪು ಒಪ್ಪಿಸುವುದು, 29ರಂದು ಬೆಳಗ್ಗೆ 6 ಗಂಟೆಗೆ ದೊಡ್ಡ ರಥೋತ್ಸವ ಮತ್ತು ಗುಗ್ಗಳ ಮಹೋತ್ಸವ ಜರುಗಲಿದೆ.
ರಥೋತ್ಸವದ ಅಂಗವಾಗಿ ಸ್ಥಳೀಯ ಪಟ್ಟಣ ಪಂಚಾಯಿತಿ, ಶ್ರೀ ವೀರಭದ್ರೇಶ್ವರ ಟ್ರಸ್ಟ್ ಕಮಿಟಿ ಮತ್ತು ಶ್ರೀ ವೀರಾಂಜನೇಯ ಕುಸ್ತಿ ಕಮಿಟಿ ಸಹಯೋಗದಲ್ಲಿ ಮಾ. 30 ಮತ್ತು 31ರಂದು ಮಧ್ಯಾಹ್ನ 3 ಗಂಟೆಗೆ ಸ್ಥಳೀಯ ಸರ್ಕಾರಿ ಪ್ರಾಥಮಿಕ ಕನ್ನಡ ಶಾಲೆ ಮೈದಾನದಲ್ಲಿ ಭಾರಿ ಬಯಲು ಜಂಗೀ ಕುಸ್ತಿಗಳು ಜರುಗಲಿವೆ ಎಂದು ಪ್ರಕಟಣೆ ತಿಳಿಸಿದೆ.