ಹಾನಗಲ್ಲ ತಾಲೂಕಿನ ಕೆಲವರಕೊಪ್ಪ ಗ್ರಾಪಂ ವ್ಯಾಪ್ತಿಯಲ್ಲಿ 1.30 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು. ಗೋಪಾಲ ಕಾನಮನಿ, ಸದಸ್ಯರಾದ ಬಸವರಾಜ ಮಾಳಣ್ಣನವರ, ಸಿದ್ದು ವಡ್ಡರ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ಹಾನಗಲ್ಲ
ತಾಲೂಕಿನ ಸಾವಿರಾರು ಎಕರೆ ಕೃಷಿಭೂಮಿಗೆ ನೀರುಣಿಸುವ, ರೈತರ ಜೀವನಾಡಿ ಧರ್ಮಾ ಜಲಾಶಯದ ಕಾಲುವೆಯ ಹೂಳೆತ್ತುವ ಕಾಮಗಾರಿಗೆ 50 ಕೋಟಿ ರೂ. ವೆಚ್ಚದಲ್ಲಿ ಈಗಾಗಲೇ ಚಾಲನೆ ನೀಡಲಾಗಿದೆ. ಕಾಲುವೆ ಹೂಳು ತುಂಬಿದ್ದರಿಂದ ಅಚ್ಚುಕಟ್ಟು ಪ್ರದೇಶದ ಕೆರೆ-ಕಟ್ಟೆಗಳಿಗೆ ಸಮರ್ಪಕವಾಗಿ ನೀರು ಹರಿಸಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಆದ್ಯತೆ ಮೇರೆಗೆ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.
ತಾಲೂಕಿನ ಕೆಲವರಕೊಪ್ಪ ಗ್ರಾಪಂ ವ್ಯಾಪ್ತಿಯಲ್ಲಿ 1.30 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ತಾಲೂಕಿನ ರಸ್ತೆಗಳ ಸುಧಾರಣೆಗೂ 50 ಕೋಟಿ ರೂ. ವೆಚ್ಚದಲ್ಲಿ ಚಾಲನೆ ನೀಡಲಾಗಿದೆ. ತಾಲೂಕಿಗೆ ವಾರ್ಷಿಕ 250 ಕೋಟಿ ರೂ. ಆರ್ಥಿಕ ನೆರವು ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಸಿಗುತ್ತಿದ್ದು, ಜನಕಲ್ಯಾಣ ಕಾರ್ಯಕ್ರಮಗಳ ಜತೆ ಜತೆಗೆ ಅಭಿವೃದ್ಧಿಗೂ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷ ಗೋಪಾಲ ಕಾನಮನಿ, ಸದಸ್ಯರಾದ ಬಸವರಾಜ ಮಾಳಣ್ಣನವರ, ಸಿದ್ದು ವಡ್ಡರ, ಶಾಂತಪ್ಪ ಬಡಣ್ಣನವರ, ಶಿವಾಜೆಪ್ಪ ಬೆಳ್ಳಿಕಟ್ಟಿ, ಬಸವರಾಜ ಕಾನಮನಿ, ಲೋಕೇಶ ಅಗಸಿಬಾಗಿಲ, ಪರಮೇಶ ಶಿಗಡಿ, ವಾಮೇಶ ಲಮಾಣಿ, ಬಸವಂತ ನಾಯ್ಕ, ಕಾಂತಪ್ಪ ಲಮಾಣಿ, ಭೀಮಣ್ಣ ಲಮಾಣಿ, ಬಂಗಾರೆಪ್ಪ ಕಲಕೇರಿ, ನಾಗರಾಜ ವಡ್ಡರ, ವೀರಭದ್ರಪ್ಪ ಕೋಳೂರ, ನಾಗಪ್ಪ ಪೂಜಾರ, ಮಹರುದ್ರಪ್ಪ ಮಾಳಣ್ಣನವರ, ಗುಡ್ಡಪ್ಪ ತಿಳವಳ್ಳಿ, ಬಸವರಾಜ ಮತ್ತಿಹಳ್ಳಿ, ನಾಗರಾಜ ಈಳಿಗೇರ, ವೆಂಕಟೇಶ ಅಗಸಿಬಾಗಿಲ, ಕೃಷ್ಣ ಮಡ್ಲೂರ ಇದ್ದರು.